ADVERTISEMENT

ಚನ್ನಗಿರಿ: ನಾಲ್ವರು ಆರೋಪಿಗಳ ಬಂಧನ,₹18 ಲಕ್ಷ ಮೌಲ್ಯದ ಸ್ವತ್ತು ವಶ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2026, 5:47 IST
Last Updated 24 ಫೆಬ್ರುವರಿ 2026, 5:47 IST
ಚನ್ನಗಿರಿ ತಾಲ್ಲೂಕು ನಲ್ಲೂರು ಹಾಗೂ ಚನ್ನಗಿರಿ ಪಟ್ಟಣದಲ್ಲಿ ನಡೆದ ಮನೆ ಕಳ್ಳತನ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಆರೋಪಿಗಳಿಂದ ವಶಪಡಿಸಿಕೊಂಡ ರೂ 18 ಲಕ್ಷ ಮೌಲ್ಯದ ಆಭರಣಗಳನ್ನು ಪ್ರದರ್ಶಿಸಲಾಯಿತು. ಎಸ್ ಪಿ ಎಚ್.ಟಿ. ಶೇಖರ್, ಹೆಚ್ಚುವರಿ ಎಸ್ ಪಿ ಪರಮೇಶ್ವರ ಹೆಗಡೆ ಹಾಗೂ ಡಿವೈಎಸ್ ಪಿ ರುದ್ರ ಪ್ಪ ೆಸ್. ಉಜ್ಜನಕೊಪ್ಪ ಇದ್ದರು.
ಚನ್ನಗಿರಿ ತಾಲ್ಲೂಕು ನಲ್ಲೂರು ಹಾಗೂ ಚನ್ನಗಿರಿ ಪಟ್ಟಣದಲ್ಲಿ ನಡೆದ ಮನೆ ಕಳ್ಳತನ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಆರೋಪಿಗಳಿಂದ ವಶಪಡಿಸಿಕೊಂಡ ರೂ 18 ಲಕ್ಷ ಮೌಲ್ಯದ ಆಭರಣಗಳನ್ನು ಪ್ರದರ್ಶಿಸಲಾಯಿತು. ಎಸ್ ಪಿ ಎಚ್.ಟಿ. ಶೇಖರ್, ಹೆಚ್ಚುವರಿ ಎಸ್ ಪಿ ಪರಮೇಶ್ವರ ಹೆಗಡೆ ಹಾಗೂ ಡಿವೈಎಸ್ ಪಿ ರುದ್ರ ಪ್ಪ ೆಸ್. ಉಜ್ಜನಕೊಪ್ಪ ಇದ್ದರು.   

ಚನ್ನಗಿರಿ: ವಿವಿಧ ಕಳವು ಪ್ರಕರಣಗಳಲ್ಲಿ ಭಾಗಿಯಾದ ನಾಲ್ವರು ಆರೋಪಿಗಳ ಬಂಧನ, ರೂ 18 ಲಕ್ಷ ಮೌಲ್ಯದ ಸ್ವತ್ತು ವಶ

ಪ್ರಜಾವಾಣಿ ವಾರ್ತೆ

ಚನ್ನಗಿರಿ: ತಾಲ್ಲೂಕು ನಲ್ಲೂರು ಹಾಗೂ ಚನ್ನಗಿರಿ ಪಟ್ಟಣಗಳಲ್ಲಿ ಮನೆಯ ಬೀಗ ಮುರಿದು ಕಳ್ಳತನ ಮಾಡಿದ್ದ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಚನ್ನಗಿರಿ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿ ನಾಲ್ವರು ಆರೋಪಿಗಳನ್ನು ಬಂಧಿಸಿ, ರೂ 18 ಲಕ್ಷ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡ ಘಟನೆ ಭಾನುವಾರ ನಡೆದಿದೆ.

ADVERTISEMENT

ತಾಲ್ಲೂಕಿನ ನಲ್ಲೂರು ಗ್ರಾಮದಲ್ಲಿ 2026 ರ ಫೆ. 14ರಂದು ಸೈಯದ್ ನಫೀಜ್ ಎಂಬುವವರ ಮನೆಯ ಬೀಗ ಮುರಿದು ಕಳ್ಳರು ಮನೆಯೊಳಗೆ ನುಗ್ಗಿ ಬಂಗಾರದ ಆಭರಣಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ನಲ್ಲೂರು ಗ್ರಾಮದ ವಾಸಿಗಳಾದ ಸೈಯದ್ ಮುದಾಸೀರ್(19), ಸೈಯದ್ ಮುಜಾವಿಲ್(19) ಹಾಗೂ ದಾವಣಗೆರೆ ನಗರದ ವಾಸಿ ಮಹಮದ್ ಸಾಹೀಲ್(24) ಅವರನ್ನು ಬಂಧಿಸಿ, ಬಂಧಿತರಿಂದ ರೂ 10 ಲಕ್ಷ ಮೌಲ್ಯದ 72 ಗ್ರಾಂ ತೂಕದ ಬಂಗಾರದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

ಅದೇ ರೀತಿ ಚನ್ನಗಿರಿ ಪಟ್ಟಣದ ಲೋಕೋಪಯೋಗಿ ಇಲಾಖೆಗೆ ಸೇರಿದ ವಸತಿಗೃಹದಲ್ಲಿ 2025ರ ಸೆ. 9ರಂದು ಗೋಪಾಲ್ ಪವಾರ್ ಎಂಬುವವರ ಮನೆ ಕಳ್ಳತನ ಮತ್ತು ಶೆಟ್ಟಿಹಳ್ಳಿ, ಮಾಡಾಳ್ ಹಾಗೂ ಅಜ್ಜಿಹಳ್ಳಿ ಗ್ರಾಮಗಳಲ್ಲಿ ಜಾನುವಾರುಗಳ ಕಳ್ಳತನಕ್ಕೆ ಸಂಬಂಧಪಟ್ಟಂತೆ ಚನ್ನಗಿರಿ ಪಟ್ಟಣದಲ್ಲಿ ನೆಲೆಸಿದ್ದ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು ಹಂಚಿನ ಸಿದ್ಧಾಪುರ ಗ್ರಾಮದ ವಾಸಿ ಆರೋಪಿ ರಾಜುವನ್ನು ಬಂಧಿಸಿ, ಬಂಧಿತನಿಂದ ರೂ 8 ಲಕ್ಷ ಮೌಲ್ಯದ 38 ಗ್ರಾಂ ತೂಕದ ಬಂಗಾರ ಮತ್ತು 200 ಗ್ರಾಂ ತೂಕದ ಬೆಳ್ಳಿ ಆಭರಣ ಹಾಗೂ ಜಾನುವಾರುಗಳಿಗೆ ಸಂಬಂಧಿಸಿದಂತೆ ರೂ 90 ಸಾವಿರ ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ.

ಎಸ್ ಪಿ ಎಚ್.ಟಿ. ಶೇಖರ್ ನಿರ್ದೇಶನದಲ್ಲಿ ಹೆಚ್ಚುವರಿ ಎಸ್ ಪಿ ಪರಮೇಶ್ವರ ಹೆಗಡೆ ಹಾಗೂ ಚನ್ನಗಿರಿ ಉಪ ವಿಭಾಗದ ಡಿವೈಎಸ್ ಪಿ ರುದ್ರ ಪ್ಪ ಎಸ್. ಉಜ್ಜನಕೊಪ್ಪ ಅವರ ಮಾರ್ಗದರ್ಶನದಲ್ಲಿ ಚನ್ನಗಿರಿ ಉಪ ವಿಭಾಗದ ಪಿಐ ಕೆ.ಎನ್. ರವೀಶ್ ನೇತೃತ್ವದಲ್ಲಿ ಸಿಬ್ಬಂದಿಗಳಾದ ರುದ್ರೇಶ್, ಧರ್ಮಪ್ಪ, ರೇವಣಸಿದ್ದಪ್ಪ, ರಮೇಶ್, ಚನ್ನಕೇಶವ, ಜಗದೀಶ್ ಹಾಗೂ ಉಮೇಶ್ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಪೊಲೀಸರ ಈ ಕಾರ್ಯಕ್ಕೆ ಎಸ್ ಪಿ ಎಚ್.ಟಿ. ಶೇಖರ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ ಎಂದು ಪಿಐ ಕೆ.ಎನ್. ರವೀಶ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.