
ಹರಿಹರ: ಸಮೀಪದ ತುಂಗಭದ್ರಾ ನದಿ ದಡಕ್ಕೆ ಜ. 14 ರಂದು ಸಂಕ್ರಾಂತಿ ಹಬ್ಬದ ನಿಮಿತ್ತ ಸುತ್ತಲಿನ ಸಾವಿರಾರು ಜನ ಆಗಮಿಸುವ ಕಾರಣ ನಗರದ ಭೂಮಿ ಸೋಶಿಯಲ್ ಡೆವಲಪ್‌ಮೆಂಟ್ ಫೌಂಡೇಷನ್ ಪದಾಧಿಕಾರಿಗಳು ಭಾನುವಾರ ಸ್ವಚ್ಚತಾ ಕಾರ್ಯ ಕೈಗೊಂಡರು.
ಈ ಹಿಂದೆ ಪತ್ರಕರ್ತ ರಾಘವೇಂದ್ರ ನೇತೃತ್ವದಲ್ಲಿ ನನ್ನ ಊರು, ನನ್ನ ಹೊಣೆ ಸಂಸ್ಥೆಯಡಿ ತುಂಗಭದ್ರ ನದಿ ದಡ ಸೇರಿದಂತೆ ವಿವಿಧ ಸಾರ್ವಜನಿಕ ಪ್ರದೇಶದ ಸ್ವಚ್ಚತಾ ಕಾರ್ಯ ನಡೆದಿತ್ತು. ಅದೇ ತಂಡ ಈಗ ಫೌಂಡೇಷನ್ ಹೆಸರಲ್ಲಿ ನೈರ್ಮಲ್ಯದ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ ಎಂದು ಗ್ಯಾರಂಟಿ ಅನುಷ್ಠಾನ ಸಮಿತಿ ತಾಲ್ಲೂಕು ಘಟಕದ ಅಧ್ಯಕ್ಷ ನಂದಿಗಾವಿ ಶ್ರೀನಿವಾಸ್ ಮೆಚ್ಚುಗೆ ವ್ಯಕ್ತಪಡಿಸಿದರು.
ನದಿ ದಡ, ದೇವಸ್ಥಾನಗಳ ಸ್ವಚ್ಛತೆ ಕಾಪಾಡುವುದು, ಸಸ್ಯಗಳನ್ನು ಬೆಳೆಸಿ ಸಂರಕ್ಷಿಸುವುದು, ಪೆಟ್ರೋಲ್ ಡೀಸೆಲ್ ವಾಹನಗಳ ಬಳಕೆ ಕಡಿಮೆ ಮಾಡುವುದು, ಅರೋಗದ ಬಗ್ಗೆ ಜಾಗೃತಿ ಮೂಡಿಸುವುದು ಈ ಸಂಸ್ಥೆ ಗುರಿಯಾಗಿದೆ ಎಂದು ಫೌಂಡೇಷನ್ ಅಧ್ಯಕ್ಷ ಟಿ.ಎನ್.ರಾಘವೇಂದ್ರ ಹೇಳಿದರು.
ಎಸ್. ವೆಂಕಟೇಶ್ ಶೆಟ್ಟಿ, ಮಂಜುನಾಥ್ ಬಿ. ಪೈಲ್ವಾನ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಜಿ.ಬಿ.ಹಾಲೇಶ್ ಗೌಡ್ರು, ಸಂಸ್ಥೆಯ ಪದಾಧಿಕಾರಿಗಳಾದ ಅಂಜು ಸುರೇಶ್, ರವಿಕುಮಾರ್, ಗಂಗಾಧರ, ಪ್ರವೀಣ್ ಮಜ್ಜಿಗೆ, ಪ್ರಶಾಂತ್, ಅಂಬುಜಾ ಬಾಯಿ. ಸಾಕ್ಷಿ ಶಿಂದೆ, ಶ್ವೇತಾ, ಎಂ.ಎಲ್. ಪ್ರವೀಣ್, ಸವಿತಾ, ಭಾಗ್ಯಾ, ರವಿ, ಕರಿಬಸಪ್ಪ ಕಂಚಿಕೇರಿ, ವಿರೇಶ್ ಬಡಿಗೇರ್, ನಗರಸಭೆ ಕಿರಿಯ ಅರೋಗ್ಯ ನಿರೀಕ್ಷಕ ಬಸವರಾಜ್ ಎಚ್.ಎಂ., ಪೌರ ಕಾರ್ಮಿಕರು ನದಿ ಅಯ್ಯಪ್ಪಸ್ವಾಮಿ ದೇವಸ್ಥಾನ ಮುಂಭಾಗದ ಪ್ರದೇಶದಲ್ಲಿ ಸ್ವಚ್ಚತಾ ಕಾರ್ಯ ಕೈಗೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.