ADVERTISEMENT

ನ್ಯಾಮತಿ: ಸಂವಿಧಾನ ದಿನಾಚರಣೆ ನಿಮಿತ್ತ ಪುಷ್ಪಾರ್ಚನೆ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2020, 12:07 IST
Last Updated 27 ನವೆಂಬರ್ 2020, 12:07 IST
ನ್ಯಾಮತಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ಸಂವಿಧಾನ ದಿನಾಚರಣಯಲ್ಲಿ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಮೇಲುಸ್ತುವಾರಿ ಸಮಿತಿ ಸದಸ್ಯ ಎಂ.ವಿ. ವೆಂಕಟೇಶ ಮಾತನಾಡಿದರು. 
ನ್ಯಾಮತಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ಸಂವಿಧಾನ ದಿನಾಚರಣಯಲ್ಲಿ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಮೇಲುಸ್ತುವಾರಿ ಸಮಿತಿ ಸದಸ್ಯ ಎಂ.ವಿ. ವೆಂಕಟೇಶ ಮಾತನಾಡಿದರು.    

ನ್ಯಾಮತಿ: ‘ಸಂವಿಧಾನ ರಚನೆಕಾರರಾದ ಪ್ರತಿಯೊಬ್ಬರನ್ನೂ ನಾವು ನೆನಪು ಮಾಡಿಕೊಳ್ಳಬೇಕಾಗಿದೆ. ದೇಶದ ಸಂವಿಧಾನವು ಹೆಮ್ಮೆಯ ಸಂವಿಧಾನ’ ಎಂದು ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಮೇಲುಸ್ತುವಾರಿ ಸಮಿತಿ ಸದಸ್ಯ ಎಂ.ವಿ. ವೆಂಕಟೇಶ ಹೇಳಿದರು.

ಪಟ್ಟಣದ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಗುರುವಾರ ಸಂವಿಧಾನ ದಿನಾಚರಣೆ ನಿಮಿತ್ತ ಡಾ. ಬಾಬಾ ಸಾಹೇಬ್ ಅಂಚೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎನ್.ಪಿ. ರೇಣುಕಮ್ಮ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಸ್.ಪಿ. ರವಿಕುಮಾರ, ಗ್ರಾಮ ಪಂಚಾಯಿತಿ ಸದಸ್ಯ ಸಿ.ಕೆ. ರವಿಕುಮಾರ, ತಾಲ್ಲೂಕು ಪಂಚಾಯಿತಿ ಇಒ ರಾಮ ಭೋವಿ, ಪುಟಾಣಿ ಅದ್ವೀತಾ ಆಚೆಮನೆ ಸಂವಿಧಾನ ಕುರಿತು ಮಾತನಾಡಿದರು.

ADVERTISEMENT

ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ದೊಡ್ಡಬಸವರಾಜ, ಜಿಲ್ಲಾ ದಲಿತ ನೌಕರರ ಸಂಘದ ಉಪಾಧ್ಯಕ್ಷ ಓಬಳೇಶ, ತಾಲ್ಲೂಕು ಡಿಎಸ್‌ಎಸ್ ಸಂಚಾಲಕ ಗುಡುದಪ್ಪ, ನಗರ ಘಟಕ ಸಂಚಾಲಕ ಅಣ್ಣಪ್ಪ, ದಲಿತ ವಿದ್ಯಾರ್ಥಿ ಒಕ್ಕೂಟದ ಸಂಚಾಲಕ ದರ್ಶನ, ಆನಂದ ಹಾಗೂ ಸಫಾಯಿ ಕರ್ಮಚಾರಿಗಳು, ವಿವಿಧ ಗ್ರಾಮ ಪಂಚಾಯಿತಿ ಪಿಡಿಒ, ಸಿಬ್ಬಂದಿ, ಕಾರ್ಯದರ್ಶಿಗಳು ಇದ್ದರು. ಸಿಬ್ಬಂದಿ ಕೆ.ಎಸ್. ಮಂಜುನಾಥ ಸ್ವಾಗತಿಸಿದರು, ಕೆ.ಎಸ್. ಶಿವಕುಮಾರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.