ADVERTISEMENT

ಕೋವಿಡ್‌ ಲ್ಯಾಬ್‌ ಪರೀಕ್ಷೆಗೆ ಸಿದ್ಧ

14 ದಿನ ಮುಗಿಸಿದ ನರ್ಸ್‌ಗೆ ಇನ್ನೆರಡು ಬಾರಿ ಪರೀಕ್ಷೆ: ಜಿಲ್ಲಾಧಿಕಾರಿ

​ಪ್ರಜಾವಾಣಿ ವಾರ್ತೆ
Published 11 ಮೇ 2020, 16:24 IST
Last Updated 11 ಮೇ 2020, 16:24 IST
ದಾವಣಗೆರೆ ಜಾಲಿನಗರ ಕಂಟೈನ್‌ಮೆಂಟ್ ಝೋನ್‌ನಲ್ಲಿನ ನಿವಾಸಿಗಳಿಗೆ ಸೋಮವಾರ ಆಹಾರ ಸಾಮಗ್ರಿಗಳನ್ನು ಜಿಲ್ಲಾಡಳಿತದ ವತಿಯಿಂದ ವಿತರಿಸಲಾಯಿತು
ದಾವಣಗೆರೆ ಜಾಲಿನಗರ ಕಂಟೈನ್‌ಮೆಂಟ್ ಝೋನ್‌ನಲ್ಲಿನ ನಿವಾಸಿಗಳಿಗೆ ಸೋಮವಾರ ಆಹಾರ ಸಾಮಗ್ರಿಗಳನ್ನು ಜಿಲ್ಲಾಡಳಿತದ ವತಿಯಿಂದ ವಿತರಿಸಲಾಯಿತು   

ದಾವಣಗೆರೆ: ಎಸ್‌ಎಸ್‌ ಹೈಟೆಕ್ ಆಸ್ಪತ್ರೆಯಲ್ಲಿ ಕೋವಿಡ್‌ ಲ್ಯಾಬ್‌ ಆರಂಭಗೊಂಡಿದ್ದು, ಅದಕ್ಕೆ ಬೇಕಾದ ಬೇಸಿಕ್‌ ಲಾಜಿಸ್ಟಿಕ್‌ ತಲುಪಿದೆ. ಸೋಮವಾರ ರಾತ್ರಿಯೇ ಅದರ ಜೋಡಣೆ ಕಾರ್ಯಗಳು ನಡೆಯಲಿವೆ. ಪರೀಕ್ಷೆ ನಡೆಸಲು ತಯಾರು ಎಂದು ಅಲ್ಲಿನ ತಜ್ಞರು ತಿಳಿಸಿದರೆ ಮಂಗಳವಾರವೇ ಸ್ವಾಬ್‌ ಕಳುಹಿಸಿ ಕೊಡಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿ, ‘ಪ್ರತಿದಿನ 100ರಿಂದ 150 ಮಾದರಿಗಳನ್ನು ಪರೀಕ್ಷೆ ಮಾಡುವ ಸಾಮರ್ಥ್ಯವನ್ನು ಈ ಲ್ಯಾಬ್‌ ಹೊಂದಿದೆ. ಅದನ್ನು ಹೆಚ್ಚು ಮಾಡಲು ಕೋರಲಾಗುವುದು’ ಎಂದು ಹೇಳಿದರು.

ಪಿ.533 ಅವರು 14 ದಿನಗಳನ್ನು ಪೂರೈಸಿದ್ದಾರೆ. ಅವರಿಗೆ 24 ಗಂಟೆಗಳ ಅವಧಿಯಲ್ಲಿ ಎರಡು ಬಾರಿ ಸ್ವಾಬ್‌ (ಗಂಟಲು ದ್ರವ) ತೆಗೆದು ಪರೀಕ್ಷೆಗೆ ಕಳುಹಿಸಲಾಗುವುದು. ಎರಡೂ ಕೂಡ ನೆಗೆಟಿವ್‌ ಎಂದು ಫಲಿತಾಂಶ ಬಂದರೆ ಆಸ್ಪತ್ರೆಯಿಂದ ಬಿಡುಗಡೆಗೊಳ್ಳಿದ್ದಾರೆ ಎಂದು ಮಾಹಿತಿ ನೀಡಿದರು.

ADVERTISEMENT

ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿರುವ ಕೊರೊನಾ ಪಾಸಿಟಿವ್ ರೋಗಿಗಳ ಮತ್ತು ಐಸೋಲೇಷನ್‌ನಲ್ಲಿರುವ ವ್ಯಕ್ತಿಗಳ ರೋಗನಿರೋಧಕ ಶಕ್ತಿ ಹೆಚ್ಚಿಸುವ ಸಲುವಾಗಿ ಆಯುಷ್ ಇಲಾಖೆಯ ಖಾದ್ಯಗಳು, ಸಿರಪ್‌ಗಳನ್ನು ನೀಡಲಾಗುತ್ತಿದೆ ಜೊತೆಗೆ ಮೈಸೂರಿನ ಸಿಎಫ್‌ಟಿಆರ್‌ಐ ನಿಂದ ಪೌಷ್ಟಿಕಾಂಶ ಭರಿತ ಮತ್ತು ವಿಟಮಿನ್ ಸಿ ಹಾಗೂ ಎ ಇರುವ ಮ್ಯಾಂಗೋ ಬಾರ್‌ಗಳು ಮತ್ತು ಸಮುದ್ರದ ಪಾಚಿ ಅಂಶವುಳ್ಳ ಸ್ಪಿರುಲಿನಾ ಚಿಕ್ಕಿಯನ್ನು ತರಿಸಿಕೊಳ್ಳಲು ಕ್ರಮ ಕೈಗೊಳ್ಳಲಾಗುವುದು ಕೊಳ್ಳಲಾಗಿದೆ. ನಾಳೆಯಿಂದಲೇ ವಿತರಣೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸಿಇಒ ಪದ್ಮ ಬಸವಂತಪ್ಪ, ಕೋವಿಡ್ ಜಿಲ್ಲಾ ನೋಡಲ್ ಅಧಿಕಾರಿ ಪ್ರಮೋದ್ ನಾಯಕ್, ಡಿಎಚ್‌ಒ ಡಾ.ರಾಘವೇಂದ್ರಸ್ವಾಮಿ, ಡಿಎಸ್‌ಒ ಡಾ.ರಾಘವನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.