ADVERTISEMENT

ದಾವಣಗೆರೆ: ಮತ್ತೆ 6 ಮಂದಿಗೆ ಕೊರೊನಾ ಸೋಂಕು ದೃಢ

​ಪ್ರಜಾವಾಣಿ ವಾರ್ತೆ
Published 6 ಜೂನ್ 2020, 12:56 IST
Last Updated 6 ಜೂನ್ 2020, 12:56 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ದಾವಣಗೆರೆ: ಜಿಲ್ಲೆಯಲ್ಲಿ ನಾಲ್ವರು ಮಹಿಳೆಯರು ಸೇರಿ 6 ಮಂದಿಗೆ ಕೊರೊನಾ ವೈರಸ್‌ ಸೋಂಕು ಇರುವುದು ಶನಿವಾರ ದೃಢಪಟ್ಟಿದೆ.

ಆನೆಕೊಂಡ ಕಂಟೈನ್‌ಮೆಂಟ್‌ ಸಂಪರ್ಕದಿಂದ 33 ವರ್ಷದ ಯುವಕನಿಗೆ (ಪಿ.4836) ಸೋಂಕು ತಗುಲಿದೆ. ಇಡಬ್ಲ್ಯುಎಸ್‌ ಕಾಲೊನಿಯ 64 ವರ್ಷದ ವೃದ್ಧರಿಗೆ (ಪಿ.4837) ಜಾಲಿನಗರದ 23 ವರ್ಷದ ಯುವಕನ (ಪಿ.3862) ಸಂಪರ್ಕದಿಂದ ಸೋಂಕು ಬಂದಿದೆ. 36 ವರ್ಷದ ಮತ್ತು 60 ವರ್ಷದ ಮಹಿಳೆಯರಿಗೆ (ಪಿ.4838, ಪಿ. 4839) ಜಾಲಿನಗರದ 73 ವರ್ಷದ ಮಹಿಳೆಯ (ಪಿ.2417) ಸಂಪರ್ಕದಿಂದ ಕೊರೊನಾ ಬಂದಿದೆ. 35 ವರ್ಷದ ಮತ್ತು 42 ವರ್ಷದ ಮಹಿಳೆಯರಿಗೆ (ಪಿ. 4840, ಪಿ. 4841) ಜಾಲಿನಗರದ 68 ವರ್ಷದ ಮಹಿಳೆಯ ಸಂಪರ್ಕದಿಂದ ವೈರಸ್‌ ಬಂದಿದೆ.

ಜಿಲ್ಲೆಯಲ್ಲಿ ಈವರೆಗೆ 186 ಪ್ರಕರಣಗಳು ಪತ್ತೆಯಾಗಿದೆ. ಶನಿವಾರ ಇಬ್ಬರು ಬಿಡುಗಡೆಗೊಂಡವರೂ ಸೇರಿ ಒಟ್ಟು 149 ಮಂದಿ ಗುಣಮುಖರಾಗಿದ್ದಾರೆ. 6 ಮಂದಿ ಮೃತಪಟ್ಟಿದ್ದಾರೆ. 31 ಸಕ್ರಿಯ ಪ್ರಕರಣಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.