ADVERTISEMENT

ದಾವಣಗೆರೆ: ಎಂಜಿನಿಯರಿಂಗ್‌ ವಿದ್ಯಾರ್ಥಿಗೆ ₹ 27 ಲಕ್ಷ ವೇತನ

​ಪ್ರಜಾವಾಣಿ ವಾರ್ತೆ
Published 8 ಜನವರಿ 2026, 2:47 IST
Last Updated 8 ಜನವರಿ 2026, 2:47 IST
<div class="paragraphs"><p>ವೇತನ (ಸಾಂದರ್ಭಿಕ ಚಿತ್ರ)</p></div>

ವೇತನ (ಸಾಂದರ್ಭಿಕ ಚಿತ್ರ)

   

– ಐಸ್ಟಾಕ್ ಚಿತ್ರ

ದಾವಣಗೆರೆ: ನಗರದ ಬಾಪೂಜಿ ಎಂಜಿನಿಯರಿಂಗ್ ಮತ್ತು ತಾಂತ್ರಿಕ ಕಾಲೇಜಿನ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉದ್ಯೋಗಕ್ಕೆ ಕ್ಯಾಂಪಸ್ ಆಯ್ಕೆಯಾಗಿದ್ದಾರೆ. ಎಲೆಕ್ಟ್ರಾನಿಕ್ ಅಂಡ್ ಕಮ್ಯುನಿಕೇಷನ್ ವಿಭಾಗದ ಸಾಯಿ ಪ್ರಥಮ್ ಅವರು ವಾರ್ಷಿಕ 27 ಲಕ್ಷದ ವೇತನ ಪಡೆದಿದ್ದಾರೆ.

ADVERTISEMENT

ಇನ್ಫೋಸಿಸ್, ಟಿಸಿಎಸ್, ಆಕ್ಸೆಂಚರ್, ಕಾಗ್ನಿಜೆಂಟಲ್, ಪೆಂಟಗಾನ್ ಸ್ಪೇಸ್ ಸೇರಿ ಇತರೆ ಕಂಪನಿಗಳಿಗೆ ಆಯ್ಕೆ ಯಾಗಿದ್ದಾರೆ. ಬಿಐಇಟಿಯ ಉದ್ಯೋಗ ಮತ್ತು ತರಬೇತಿ ವಿಭಾಗದ ಮುಖ್ಯಸ್ಥ ಸಿ.ಆ‌ರ್. ನಿರ್ಮಲಾ ನೇತೃತ್ವದಲ್ಲಿ ಉದ್ಯೋಗಾರ್ಹತೆ ವೃದ್ಧಿಸಲು ನೀಡಲಾದ ತರಬೇತಿಯ ಫಲವಾಗಿ ಇಷ್ಟು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ ಎಂದು ಪ್ರಾಂಶುಪಾಲ ಎಚ್.ಬಿ. ಅರವಿಂದ್ ಪ್ರಕಟಣೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.