ADVERTISEMENT

ಎರಡನೇ ದಿನ 1364 ಮಂದಿ ಗೈರು: ದ್ವಿತೀಯ ಪಿಯು ಪರೀಕ್ಷೆ

31 ಕೇಂದ್ರಗಳಲ್ಲಿ ನಡೆದ ದ್ವಿತೀಯ ಪಿಯು ಪರೀಕ್ಷೆ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2022, 5:15 IST
Last Updated 24 ಏಪ್ರಿಲ್ 2022, 5:15 IST
ದ್ವಿತೀಯ ಪಿಯು ಪರೀಕ್ಷೆ ಎರಡನೇ ದಿನವಾದ ದಾವಣಗೆರೆಯ ಪಿ.ಜೆ. ಬಡಾವಣೆಯ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ನೋಂದಣಿ ಸಂಖ್ಯೆ ಹುಡುಕಿಕೊಂಡರು.
ದ್ವಿತೀಯ ಪಿಯು ಪರೀಕ್ಷೆ ಎರಡನೇ ದಿನವಾದ ದಾವಣಗೆರೆಯ ಪಿ.ಜೆ. ಬಡಾವಣೆಯ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ನೋಂದಣಿ ಸಂಖ್ಯೆ ಹುಡುಕಿಕೊಂಡರು.   

ದಾವಣಗೆರೆ: ದ್ವಿತೀಯ ಪಿಯು ಪರೀಕ್ಷೆ 31 ಕೇಂದ್ರಗಳಲ್ಲಿ ಎರಡನೇ ದಿನವೂ ಸುಸೂತ್ರವಾಗಿ ನಡೆಯಿತು.

ಗಣಿತ ವಿಷಯದಲ್ಲಿ 8,473 ವಿದ್ಯಾರ್ಥಿಗಳು ನೊಂದಾಯಿಸಿದ್ದು, 7,260 ವಿದ್ಯಾರ್ಥಿಗಳು ಪರೀಕ್ಷೆ ಬರೆದರು. 1213 ವಿದ್ಯಾರ್ಥಿಗಳು ಗೈರಾಗಿದ್ದರು. ಶಿಕ್ಷಣ ವಿಷಯದಲ್ಲಿ ನೋಂದಾಯಿಸಿದ್ದ 802 ವಿದ್ಯಾರ್ಥಿಗಳಲ್ಲಿ 651 ಮಂದಿ ಪರೀಕ್ಷೆ ಬರೆದಿದ್ದು, 151 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು.

25 ಮುಸ್ಲಿಂ ವಿದ್ಯಾರ್ಥಿನಿಯರು ಗೈರು: ಎರಡನೇ ದಿವಸ ದಾವಣಗೆರೆಯಲ್ಲಿ 7, ಹರಿಹರದಲ್ಲಿ 9 ಮಲೇಬೆನ್ನೂರಿನಲ್ಲಿ 2 ಹಾಗೂ ಜಗಳೂರಿನ ಒಂದು ಸೇರಿ ಜಿಲ್ಲೆಯಲ್ಲಿ 25 ಮುಸ್ಲಿಂ ವಿದ್ಯಾರ್ಥಿನಿಯರು ಗೈರಾಗಿದ್ದರು. ಅನಾರೋಗ್ಯ ಹಾಗೂ ದೀರ್ಘ ಅವಧಿಗೆ ಗೈರು ಹಾಜರಾಗಿದ್ದುದರಿಂದ ಪರೀಕ್ಷೆಗೂ ಗೈರಾಗಿದ್ದಾರೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.