ADVERTISEMENT

ದಾವಣಗೆರೆ: ಮೌಲ್ಯಮಾಪನ ಮುಗಿದ 2 ಗಂಟೆಯಲ್ಲಿ ಫಲಿತಾಂಶ

​ಪ್ರಜಾವಾಣಿ ವಾರ್ತೆ
Published 29 ಜುಲೈ 2025, 5:50 IST
Last Updated 29 ಜುಲೈ 2025, 5:50 IST
ದಾವಣಗೆರೆ ವಿಶ್ವವಿದ್ಯಾಲಯ
ದಾವಣಗೆರೆ ವಿಶ್ವವಿದ್ಯಾಲಯ   

ದಾವಣಗೆರೆ: ದಾವಣಗೆರೆ ವಿಶ್ವವಿದ್ಯಾಲಯವು ಸ್ನಾತಕ ಪದವಿಯ 6ನೇ ಸೆಮಿಸ್ಟರ್‌ ಪರೀಕ್ಷೆಯ ಮೌಲ್ಯಮಾಪನ ಕಾರ್ಯ ಮುಗಿದ 2 ಗಂಟೆಯ ಒಳಗೆ ಫಲಿತಾಂಶ ಪ್ರಕಟಿಸಿದೆ. ಅತಿ ಶೀಘ್ರ ಪದವಿ ಫಲಿತಾಂಶ ನೀಡಿದ ಹೆಗ್ಗಳಿಕೆಗೆ ವಿಶ್ವವಿದ್ಯಾಲಯ ಪಾತ್ರವಾಗಿದೆ.

2 ಮತ್ತು 4ನೇ ಸೆಮಿಸ್ಟರ್‌ ಪರೀಕ್ಷೆಯ ಫಲಿತಾಂಶವನ್ನು ಮೌಲ್ಯಮಾಪನ ಕಾರ್ಯ ಮುಗಿದ 2 ದಿನಗಳಲ್ಲಿ ಪ್ರಕಟಿಸಿದೆ. ಉನ್ನತ ಶಿಕ್ಷಣಕ್ಕೆ ತೆರಳುವ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಪರೀಕ್ಷೆ ನಡೆದ 12 ದಿನಗಳ ಒಳಗಾಗಿ ಫಲಿತಾಂಶ ನೀಡಿದೆ.

‘2024-25ನೇ ಶೈಕ್ಷಣಿಕ ಸಾಲಿನ ಬಿಎ, ಬಿಎಸ್‌ಸಿ, ಬಿಕಾಂ, ಬಿಬಿಎ, ಮತ್ತು ಬಿಸಿಎ ವಿಭಾಗದ ಪರೀಕ್ಷೆಗಳು ಜುಲೈ 16ಕ್ಕೆ ಪೂರ್ಣಗೊಂಡಿದ್ದವು. ವಿಶ್ವವಿದ್ಯಾಲಯ ವ್ಯಾಪ್ತಿಯ 104 ಕಾಲೇಜುಗಳ 50,470 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದರು. ಅತಿ ಶೀಘ್ರವಾಗಿ ಫಲಿತಾಂಶ ಪ್ರಕಟಿಸಿದ್ದು ವಿಶ್ವವಿದ್ಯಾಲಯದ ದಾಖಲೆ’ ಎಂದು ಕುಲಪತಿ ಪ್ರೊ.ಬಿ.ಡಿ. ಕುಂಬಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT
ಪ್ರೊ.ಬಿ.ಡಿ. ಕುಂಬಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.