ADVERTISEMENT

ಕೋವಿಡ್‌ಗೆ ದಾವಣಗೆರೆಯ ಮತ್ತೊಬ್ಬ ಮಹಿಳೆ ಸಾವು

​ಪ್ರಜಾವಾಣಿ ವಾರ್ತೆ
Published 7 ಮೇ 2020, 8:13 IST
Last Updated 7 ಮೇ 2020, 8:13 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ದಾವಣಗೆರೆ: ಕೋವಿಡ್‌-19 ರೋಗದಿಂದ ಜಿಲ್ಲೆಯಲ್ಲಿ 55 ವರ್ಷ ಮಹಿಳೆಯೊಬ್ಬರು (ಪಿ-694) ಗುರುವಾರ ಮೃತಪಟ್ಟಿದ್ದಾರೆ.

ಮೃತ ಈ ಮಹಿಳೆಯೂ ಸೇರಿ ಕೊರೊನಾ ವೈರಸ್‌ನ ಸೋಂಕು ಮತ್ತೆಮೂವರು ಮಹಿಳೆಯರಿಗೆ ತಗುಲಿರುವುದು ಗುರುವಾರ ಬಂದ ವೈದ್ಯಕೀಯ ವರದಿ ದೃಢಪಡಿಸಿದೆ.

ತೀವ್ರ ಉಸಿರಾಟ ಸಮಸ್ಯೆಯಿಂದ (SARI) ಬಳಲುತ್ತಿದ್ದ ಮಹಿಳೆಯು ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಇದುವರೆಗೆ ಒಟ್ಟು ನಾಲ್ವರು ಕೋವಿಡ್ ರೋಗದಿಂದ ಮೃತಪಟ್ಟಂತಾಗಿದೆ.

ADVERTISEMENT

53 ವರ್ಷದ ಮಹಿಳೆ (ಪಿ-695) ಹಾಗೂ 40 ವರ್ಷದ ಮಹಿಳೆಗೂ (ಪಿ-696) ಹೊಸದಾಗಿ ಸೋಂಕು ತಗುಲಿದೆ.

ಇದುವರೆಗೂ ಜಿಲ್ಲೆಯಲ್ಲಿ ಒಟ್ಟು 47 ಜನರಿಗೆ ಕೊರೊನಾ ಸೋಂಕು ತಗುಲಿದೆ. ಇಬ್ಬರು ರೋಗಿಗಳು ಗುಣಮುಖರಾಗಿದ್ದಾರೆ. ಒಟ್ಟು 41 ಕೋವಿಡ್ ಪ್ರಕರಣಗಳು ಸಕ್ರಿಯವಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.