ADVERTISEMENT

VIDEO | ದಾವಣಗೆರೆ ಯುವಜನೋತ್ಸವದಲ್ಲಿ ರಾಜ್ಯದ ಕಲೆ–ಸಂಸ್ಕೃತಿ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 8 ಜನವರಿ 2025, 12:17 IST
Last Updated 8 ಜನವರಿ 2025, 12:17 IST

ರಾಜ್ಯಮಟ್ಟದ ಯುವಜನೋತ್ಸವ ನಾಲ್ಕನೇ ಬಾರಿಗೆ ದಾವಣಗೆರೆಯಲ್ಲಿ ನಡೆಯಿತು. ನಗರದ ನಾಲ್ಕು ಭಾಗಗಳಲ್ಲಿ ಉತ್ಸವ ನಡೆಯಿತು. ಬಿಐಟಿ ಎಂಜಿನಿಯರಿಂಗ್ ಕಾಲೇಜು ಸಭಾಂಗಣದಲ್ಲಿ ಆಯೋಜಿಸಿದ್ದ ಜನಪದ ನೃತ್ಯ ಮನಸೂರೆಗೊಂಡಿತು. ರಾಜ್ಯದ 29 ಜಿಲ್ಲೆಗಳ ಕಲಾತಂಡಗಳು ಜನಪದ ನೃತ್ಯಗಳನ್ನು ಪ್ರದರ್ಶಿಸಿದವು. ಇದಲ್ಲದೆ, ಕುಂದವಾಡ ಕೆರೆಯಲ್ಲಿ ಕಯಾಕಿಂಗ್‌, ಕೆನೋಯಿಂಗ್‌ ಕ್ರೀಡೆ ಹಾಗೂ ಜಟ್‌ಸ್ಕಿಯನ್ನು ಕೊಂಡಜ್ಜಿ ಕೆರೆಯಲ್ಲಿ ನಡೆಸಲಾಯಿತು. ಸಮಾರೋಪ ಸಮಾರಂಭಕ್ಕೂ ಮುನ್ನ ಹೊರ ರಾಜ್ಯಗಳ ಕಲಾತಂಡಗಳು ಜನಮನ ರಂಜಿಸಿದವು. ಮಹಾರಾಷ್ಟ್ರದ ಲಾವಣಿ ನೃತ್ಯವನ್ನು ಮುಂಬೈ ಕಲಾತಂಡ ಪ್ರದರ್ಶನ ನೀಡಿದ ರೀತಿ ಮೈಮನ ರೋಮಾಂಚನಗೊಳಿಸಿತು. ಹಾಡಿಗೆ ಯುವತಿಯರ ತಂಡ ಹೆಜ್ಜೆ ಹಾಕಿದ ಪರಿಯನ್ನು ಕಂಡು ಪ್ರೇಕ್ಷಕರು ಸಂಭ್ರಮಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.