
ಬಸವಾಪಟ್ಟಣ: ಕೇಂದ್ರ ಸರ್ಕಾರವು 2047ರ ವಿಕಸಿತ ಭಾರತದ ಗುರಿ ಇಟ್ಟುಕೊಂಡು ಗ್ರಾಮೀಣ ಉದ್ಯೋಗ ಸೃಷ್ಟಿ ಮಾಡಿದೆ ಎಂದು ಮಾಜಿ ಶಾಸಕ ಎಂ.ಬಸವರಾಜ ನಾಯ್ಕ್ ಹೇಳಿದರು.
ಗ್ರಾಮದ ಸಮೀಪ ಕೂಲಿ ಕಾರ್ಮಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ವಿಬಿ–ಜಿರಾಮ್‌ಜಿ ಯೋಜನೆಯ ಬಗ್ಗೆ ವಿವರಿಸಿದರು.
ಯೋಜನೆಯು ಏಪ್ರಿಲ್ ಒಂದರಿಂದ ಜಾರಿಗೆ ಬರಲಿದ್ದು, ವರ್ಷದಲ್ಲಿ 125 ದಿನಗಳ ಕೂಲಿ ನೀಡಲಾಗುತ್ತದೆ. ದಿನಕ್ಕೆ ₹370 ಕೂಲಿಯನ್ನು ಖಾತೆಗೆ ಜಮೆ ಮಾಡಲಾಗುತ್ತದೆ. ಯಾವ ಮಧ್ಯವರ್ತಿಗಳ ಪಾತ್ರವೂ ಇರುವುದಿಲ್ಲ. ಗ್ರಾಮ ಸಭೆಗಳ ಮೂಲಕ ಕಾಮಗಾರಿ ಯೋಜನೆ ಸಿದ್ಧಪಡಿಸಿ ಅನುಷ್ಠಾನಗೊಳಿಸಲಾಗುತ್ತದೆ. ಬಯೋಮೆಟ್ರಿಕ್ ಹಾಜರಾತಿ ಇರುವುದರಿಂದ ಕಾರ್ಮಿಕನಿಗೆ ಅನ್ಯಾಯವಾಗುವುದಿಲ್ಲ. ಈ ಬಗ್ಗೆ ಯಾವ ಆತಂಕವೂ ಬೇಡ’ ಎಂದು ತಿಳಿಸಿದರು.
ಐದು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಯೋಜನೆಯ ಮಾಹಿತಿ ನೀಡಲಾಗಿದೆ ಎಂದು ಮಾಯಕೊಂಡ ಬಿಜೆಪಿ ಮಂಡಲ ಪ್ರಧಾನ ಬಿ.ಜಿ.ಸಚಿನ್ ಹೇಳಿದರು.
ಮಂಡಲದ ಪ್ರಧಾನ ಕಾರ್ಯದರ್ಶಿ ಕೆ.ಮಲ್ಲಿಕಾರ್ಜುನ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಡಿ.ಆರ್.ಹಾಲೇಶ್, ಎಸ್.ಎಂ.ರುದ್ರೇಶ್, ವಿ.ಎಸ್.ಎಸ್.ಎನ್. ಅಧ್ಯಕ್ಷ ಎಂ.ಎಸ್. ರೇವಣಸಿದ್ಧಪ್ಪ, ನಿರ್ದೇಶಕ ಡಿ.ನಾಗರಾಜ್, ಹಾಲುಮತ ಸಮೂಹದ ತಾಲ್ಲೂಕು ಘಟಕದ ಅಧ್ಯಕ್ಷ ಎಚ್.ಹೊನ್ನಪ್ಪ, ಬಿಜೆಪಿ ಮುಖಂಡರಾದ ಬಿ.ಜಿ.ಷಣ್ಮುಖಪ್ಪ, ಕೆ.ಎಂ.ಮಲ್ಲಿಕಾರ್ಜುನ, ಎಂ.ಜಿ.ಬಸವನಗೌಡ, ಎಂ.ವಿ.ಬಸವರಾಜಪ್ಪ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.