ನ್ಯಾಮತಿ: ತಾಲ್ಲೂಕಿನ ಮುಸ್ಸೆನಾಳ್ ಮತ್ತು ದೊಡ್ಡೇರಿ ಗ್ರಾಮಗಳಿಗೆ ಗಣಪತಿ ವಿಸರ್ಜನೆ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಭಾನುವಾರ ಬಂದಿದ್ದ ಡಿ.ಜೆ. ವಾಹನಗಳನ್ನು (ಡಿಸ್ಕ್ ಜಾಕಿ) ಪೊಲೀಸರು ವಾಪಸ್ ಕಳುಹಿಸಿದರು.
ದೊಡ್ಡೇರಿ ಗ್ರಾಮದಲ್ಲಿ ಡಿ.ಜೆ ಸಂಗೀತಕ್ಕೆ ಸಂಬಂಧಿಸಿದ ಉಪಕರಣಗಳನ್ನು ವಾಹನದಿಂದ ಕೆಳಗೆ ಇಳಿಸಿ ಜೋಡಣೆಗೆ ಸಿದ್ಧತೆ ಮಾಡಿಕೊಳ್ಳುವಾಗ ಪೊಲೀಸರು ತಡೆದು ಠಾಣೆಗೆ ಕರೆತಂದರು. ಮುಸ್ಸೇನಾಳ್ ಗ್ರಾಮದ ಗಣಪತಿ ವಿಸರ್ಜನೆ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಡಿ.ಜೆ.ಯನ್ನು ಮಾರ್ಗಮಧ್ಯೆ ಕಂಚುಗಾರನಹಳ್ಳಿ ಬಳಿ ತಡೆದು ಪೊಲೀಸ್ ಠಾಣೆಗೆ ಕರೆತರಲಾಯಿತು.
ಡಿ.ಜೆ ಬಳಕೆ ನಿರ್ಬಂಧ ಕುರಿತಂತೆ ಜಿಲ್ಲಾಧಿಕಾರಿ ಹೊರಡಿಸಿರುವ ಆದೇಶದ ಬಗ್ಗೆ ಎರಡೂ ಡಿ.ಜೆ. ಮಾಲೀಕರಿಗೆ ಮಾಹಿತಿ ನೀಡಿದ ಸಬ್ ಇನ್‌ಸ್ಪೆಕ್ಟರ್ ಹೊಳೆಬಸಪ್ಪ ಹೂಳಿ ಅವರು, ಮುಚ್ಚಳಿಗೆ ಪತ್ರ ಬರೆಸಿಕೊಂಡು ವಾಪಸ್ ಹೋಗುವಂತೆ ಸೂಚಿಸಿದರು.
ಪೊಲೀಸರ ಈ ನಡೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು. ‘ಪೊಲೀಸರ ಸೂಚನೆಯನ್ನು ನಾವು ಪಾಲಿಸುತ್ತೇವೆ. ಯಾರೂ ಡಿ.ಜೆ. ಬಳಸಬೇಡಿ’ ಎಂದು ಡಿ.ಜೆ.ಮಾಲೀಕರು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಎ.ಎಸ್.ಐ ಮಲ್ಲೇಶಪ್ಪ, ಸಿಬ್ಬಂದಿ ಕೆ.ಮಂಜುನಾಥ, ಮಹೇಶನಾಯ್ಕ, ದೇವರಾಜ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.