ADVERTISEMENT

ದಾವಣಗೆರೆ ಮಹಾನಗರ ಪಾಲಿಕೆ ಮೇಯರ್, ಉಪಮೇಯರ್ ಚುನಾವಣೆ 

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2020, 5:56 IST
Last Updated 19 ಫೆಬ್ರುವರಿ 2020, 5:56 IST

ದಾವಣಗೆರೆ: ಮೇಯರ್ ಸ್ಥಾನಕ್ಕೆ ಬಿಜೆಪಿಯಿಂದ ಬಿ.ಜೆ. ಅಜಯ್ ಕುಮಾರ್ ಮತ್ತು ಕಾಂಗ್ರೆಸ್ ಪಕ್ಷದಿಂದ ದೇವರಮನಿ ಶಿವಕುಮಾರ್ ನಾಮಪತ್ರ ಸಲ್ಲಿಸಿದ್ದಾರೆ.

ಅಜಯ್ ಕುಮಾರ್ ಅವರಿಗೆ ಸೂಚಕರಾಗಿ ಪ್ರಸನ್ನಕುಮಾರ್, ಅನುಮೋದಕರಾಗಿ ರಾಕೇಶ್ ಜಾಧವ್ ಅವರು ನೇಮಕಗೊಂಡಿದ್ದರೆ, ದೇವರಮನಿ ಶಿವಕುಮಾರ್ ಅವರಿಗೆ ಸೂಚಕರಾಗಿ ಜಿ.ಎಸ್.ಮಂಜುನಾಥ್ ಮತ್ತು ಅನುಮೋದಕರಾಗಿ ಚಮನ್ಸಾಬ್ ಅವರು ನೇಮಕಗೊಂಡಿದ್ದಾರೆ.

ಉಳಿದಂತೆ ಉಪಮೇಯರ್ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಪಕ್ಷೇತರ ಸದಸ್ಯೆ ಸೌಮ್ಯ ನರೇಂದ್ರ ಕುಮಾರ್ ನಾಮಪತ್ರ ಸಲ್ಲಿಸಿದ್ದಾರೆ. ಇವರಿಗೆ ಸೂಚಕರಾಗಿ ಯಶೋದಾ ಬಿ.ಎ ಅನುಮೋದಕರಾಗಿ ಗೌರಮ್ಮ ಅವರನ್ನು ನೇಮಿಸಲಾಗಿದೆ.

ADVERTISEMENT

ಉಪಮೇಯರ್‌ಗೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಜೆಡಿಎಸ್‌ನ ನೂರ್ ಜಹಾನ್ ಬಿ ನಾಮಪತ್ರ ಸಲ್ಲಿಸಿರುವುದು ಕುತೂಹಲ ಮೂಡಿಸಿದೆ. ಇವರ ನಾಮಪತ್ರಕ್ಕೆ ಸೂಚಕರಾಗಿ ಶಿವಲೀಲಾ, ಅನುಮೋದಕರಾಗಿ ವಿನಾಯಕ ಬಿ.ಹೆಚ್ ಅವರನ್ನು ನೇಮಿಸಲಾಗಿದೆ.

ಇನ್ನೂ ಪಾಲಿಕೆ ಕಡೆಗೆ ಬಾರದ ಕಾಂಗ್ರೆಸ್ ಸದಸ್ಯರಾದ ಯಶೋದಾ ಉಮೇಶ್, ಜೆ.ಎನ್. ಶ್ರೀನಿವಾಸ ಮತ್ತು ಶ್ವೇತಾ ಎಸ್. ಅವರನ್ನು ಗೈರು ಆಗುವಂತೆ ಬಿಜೆಪಿ ಮಾಡಿರುವ ಶಂಕೆ ವ್ಯಕ್ತವಾಗಿದೆ. ಈ ಮಧ್ಯೆ ಕಾಂಗ್ರೆಸ್ ನಾಯಕರು ಈ ಮೂವರ ಮನೆಗಳಿಗೆ ಭೇಟಿ ನೀಡಿದ್ದಾರೆ. ಆದರೆ ಶ್ರೀನಿವಾಸ - ಶ್ವೇತಾ ದಂಪತಿ ಮತ್ತು ಯಶೋದಾ ಮನೆಯಲ್ಲಿಲ್ಲ.

ಉಪಮೇಯರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿರುವ ಆಶಾ ಡಿ.ಎಸ್ ಅವರಿಗೆ ಸೂಚಕರಾಗಿ ಸೈಯದ್ ಚಾರ್ಲಿ, ಅನುಮೋದಕರಾಗಿ ಸುಧಾ ನೇಮಕಗೊಂಡಿದ್ದರೆ, ಇವರ 2 ನೇ ನಾಮಪತ್ರಕ್ಕೆ ಸೂಚಕರಾಗಿ ಎ.ಬಿ.ರಹೀಮ್, ಅನುಮೋದಕರಾಗಿ ನಾಗರಾಜ ನೇಮಕಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.