ADVERTISEMENT

ದಾವಣಗೆರೆಯಲ್ಲಿ ಮತ್ತೆ ಹನ್ನೊಂದು ಜನರಿಗೆ ಕೋವಿಡ್‌ ಸೋಂಕು ದೃಢ

​ಪ್ರಜಾವಾಣಿ ವಾರ್ತೆ
Published 26 ಮೇ 2020, 8:17 IST
Last Updated 26 ಮೇ 2020, 8:17 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ದಾವಣಗೆರೆ: ಒಂಬತ್ತು ವರ್ಷದ ಇಬ್ಬರು ಬಾಲಕರು ಹಾಗೂ ಆರು ಮಹಿಳೆ ಸೇರಿ ಹನ್ನೊಂದು ಜನರಿಗೆ ಮಂಗಳವಾರ ಸೋಂಕು ಪತ್ತೆಯಾಗಿದೆ.

ನಗರದ ವಿನಾಯಕ ನಗರದ ನಿವಾಸಿ 69 ವರ್ಷದ ವ್ಯಕ್ತಿಯಿಂದ (ಪಿ. 1378) 38 ವರ್ಷದ ವ್ಯಕ್ತಿ (ಪಿ.2275), 9 ಮತ್ತು 14 ವರ್ಷದ ಬಾಲಕರು (2276, 2278) ಹಾಗೂ 36 ವರ್ಷದ ಮಹಿಳೆಗೆ (2277) ಸೋಂಕು ತಗಲಿದೆ.

ಕಂಟೈಮೆಂಟ್ ಜೋನ್ ಸಂಪರ್ಕದಿಂದ ಮೇ 19 ರಂದು ಸೋಂಕು ಪತ್ತೆಯಾಗಿತ್ತು. ಈ ನಾಲ್ವರು ಅವರ ಪುತ್ರ ಹಾಗೂ ಸಂಬಂಧಿಕರು.
ಜಾಲಿನಗರದ ಮಹಿಳೆಯಿಂದ (933) 9 ವರ್ಷದ ಬಾಲಕ (2281), 26 ವರ್ಷದ ಮಹಿಳೆ(2282) ಹಾಗೂ 22 ವರ್ಷದ ಯುವತಿಗೆ (2257) ವೈರಸ್ ಬಂದಿದೆ.

ADVERTISEMENT

ಗುಜರಾತಿನಿಂದ ಬಂದ ಬಸವಾಪಟ್ಟಣದ 39 ವರ್ಷದ ವ್ಯಕ್ತಿಗೆ (2280) ಸೋಂಕು ಬಂದಿದೆ. (2279)ಗೆ ಭಾಷಾನಗರದ 33 ವರ್ಷದ ಪುರುಷನಿಂದ ಸೋಂಕು.

ತರಳಬಾಳು ಬಡಾವಣೆಯ 47 ವರ್ಷದ ಮಹಿಳೆ (2208), ಜಾಲಿನಗರದ 63 ವರ್ಷದ ಮಹಿಳೆ (2279) ಇಬ್ಬರು ಸಾರಿ ಹಾಗೂ ಐಎಲ್ ಐ ಕೇಸ್ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.