ADVERTISEMENT

ನ್ಯಾಮತಿ: ಅಧಿಕಾರಿಗಳ ಸೋಗಿನಲ್ಲಿ ವೃದ್ದ ದಂಪತಿಗೆ ವಂಚನೆ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2026, 2:52 IST
Last Updated 19 ಫೆಬ್ರುವರಿ 2026, 2:52 IST
<div class="paragraphs"><p>&nbsp;ವಂಚನೆ–ಪ್ರಾತಿನಿಧಿಕ ಚಿತ್ರ</p></div>

 ವಂಚನೆ–ಪ್ರಾತಿನಿಧಿಕ ಚಿತ್ರ

   

ನ್ಯಾಮತಿ: ಅಧಿಕಾರಿಗಳ ಸೋಗಿನಲ್ಲಿ ಮನೆಗೆ ಬಂದಿದ್ದ ದುಷ್ಕರ್ಮಿಗಳು ಪಟ್ಟಣದ ಸಂಪಗಿ ರಸ್ತೆಯ ವೃದ್ಧ ದಂಪತಿಯನ್ನು ವಂಚಿಸಿ, ನಗದು ಹಾಗೂ ಚಿನ್ನಾಭರಣ ದೋಚಿರುವ ಘಟನೆ ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈಚೆಗೆ ನಡೆದಿದೆ. 

ಎಚ್. ವಿಜಯಕುಮಾರ, ಎಚ್.ವಿ.ಶೀಲಾ ದಂಪತಿ ವಂಚನೆಗೊಳಗಾದವರು.

ADVERTISEMENT

ಸ್ಥಳೀಯ ಸಂಸ್ಥೆಯ ಸಿಬ್ಬಂದಿ ಎಂಬುದಾಗಿ ಹೇಳಿಕೊಂಡು ಬಂದಿದ್ದ ಇಬ್ಬರು ಅಪರಿಚಿತರು, ಸರ್ಕಾರದಿಂದ ಉಚಿತವಾಗಿ ನೀರಿನ ಟ್ಯಾಂಕ್, ಪೈಪ್‌ಲೈನ್ ಮಾಡಿಸುತ್ತೇವೆ ಎಂದು ಹೇಳಿ ಮನೆಯ ಟ್ಯಾಂಕ್, ಪೈಪ್‌ಲೈನ್‌ ಪರಿಶೀಲಿಸಿದ್ದರು. ಇಬ್ಬರನ್ನೂ ಮಹಡಿ ಮೇಲೆ ಕರೆದುಕೊಂಡು ಹೋಗಿದ್ದರು. ಅಧಿಕಾರಿಗಳು ಬಂದು ಮಂಜೂರು ಮಾಡುತ್ತಾರೆ ಎಂದು ಹೇಳಿ ಅಲ್ಲಿಂದ ತೆರಳಿದ್ದರು. ಎರಡು ದಿನಗಳ ನಂತರ ಬೀರು ತೆರೆದಾಗ ಅದರಲ್ಲಿ ಇರಿಸಿದ್ದ ₹7,500 ನಗದು ಇರಲಿಲ್ಲ. ಅನುಮಾನಗೊಂಡು ಪರಿಶೀಲಿಸಿದಾಗ ಒಡವೆಗಳೂ ಕಳುವಾಗಿರುವುದು ಗೊತ್ತಾಯಿತು. ಚಿನ್ನಾಭರಣದ ಮೌಲ್ಯ ₹19.5 ಲಕ್ಷ ಎಂದು ತಿಳಿಸಿರುವ ದಂಪತಿ, ಆರೋಪಿಗಳನ್ನು ಪತ್ತೆ ಮಾಡುವಂತೆ ದಂಪತಿ ಪೊಲೀಸರಿಗೆ ದೂರು ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.