ಸಾಸ್ವೆಹಳ್ಳಿ: ‘ರೈತರಿಗಾಗಿ, ರೈತರಿಂದ, ರೈತರಿಗೋಸ್ಕರವೇ ಆರಂಭಗೊಂಡಿರುವ ಬಲರಾಮ ರೈತ ಉತ್ಪಾದಕರ ಕಂಪನಿ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ಪ್ರಸ್ತುತ 715 ಷೇರುದಾರರನ್ನು ಕಂಪನಿ ಹೊಂದಿದೆ’ ಎಂದು ಕಂಪನಿಯ ನಿರ್ದೇಶಕ ಗಿರೀಶ್ ಪಟೇಲ್ ಹೇಳಿದರು.
ಇಲ್ಲಿನ ಬಲರಾಮ ರೈತ ಉತ್ಪಾದಕರ ಕಂಪನಿ ವತಿಯಿಂದ ನಡೆದ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು.
‘ಕಂಪನಿಯ ಷೇರುದಾರರು ತಮಗೆ ಬೇಕಾದ ರೈತ ಪರಿಕರಗಳನ್ನು ಕೊಂಡುಕೊಂಡು ವ್ಯವಹಾರ ಮಾಡಿದಾಗ ಮಾತ್ರ ಕಂಪನಿಗಳು ಅಭಿವೃದ್ಧಿಯಾಗುತ್ತವೆ ಮತ್ತು ರೈತರಿಗೂ ಅನುಕೂಲವಾಗುತ್ತದೆ’ ಎಂದು ತಿಳಿಸಿದರು.
ಸಮಗ್ರ ಕೃಷಿಕ ಹೊಳೆಬೈರನಹಳ್ಳಿಯವರಾದ ಕುಮಾರ್ ನಾಯ್ಡ ಮಾತನಾಡಿ, ‘ರೈತರು ಒಂದೇ ಬೆಳೆಯನ್ನೇ ಅವಲಂಬಿಸುವುದನ್ನು ಬಿಟ್ಟು, ತೋಟಗಳಲ್ಲಿ ಮಿಶ್ರ ಬೆಳೆ ಪದ್ಧತಿ ಅನುಸರಿಸಬೇಕು. ಏಲಕ್ಕಿ, ಕಾಳು ಮೆಣಸು, ಚಕ್ಕೆ ಸೇರಿದಂತೆ ವಿವಿಧ ಪ್ರಕಾರದ ಬೆಳೆಗಳನ್ನು ಬೆಳೆಯುವುದರಿಂದ ಇಳುವರಿ ಪಡೆದು ತಾವು ಬೆಳೆಯುವುದರೊಂದಿಗೆ ಕುಟುಂಬವು ಸಹ ಆರ್ಥಿಕವಾಗಿ ಸಬಲವಾಗುತ್ತದೆ’ ಎಂದರು.
ಈ ಸಂದರ್ಭದಲ್ಲಿ ಅಧ್ಯಕ್ಷ ಅಪ್ಪನ ರಾಜು, ನಿರ್ದೇಶಕರಾದ ಹರ್ಷ ಪಾಟೀಲ್, ಶಿವಮೂರ್ತಪ್ಪ, ನಾಗರಾಜಪ್ಪ ಇ.ಎಚ್., ಹಾಲಸ್ವಾಮಿ ಕೆ.ವಿ. ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.