ಹಿರಿಯೂರು: ನಗರದ ತೇರುಮಲೇಶ್ವರಸ್ವಾಮಿ ದೇವಸ್ಥಾನದ ಆವರಣದಲ್ಲಿರುವ ಕಾಳಿಕಾಂಬಾದೇವಿ ಅಮ್ಮನವರ ರಥೋತ್ಸವ ಏ. 30ರಂದು ಬೆಳಿಗ್ಗೆ 10.30ಕ್ಕೆ ನಡೆಯಲಿದೆ ಎಂದು ದೇವಸ್ಥಾನದ ಅರ್ಚಕರು ಹೇಳಿದ್ದಾರೆ.
ಏ. 28ರಂದು ಗಂಗಾ ಪೂಜೆ, ಗಣಪತಿ ಪೂಜೆ, ಕಂಕಣ ಪೂಜೆ, ಧ್ವಜಾರೋಹಣದ ನಂತರ ಅಭಿಷೇಕ ನಡೆಯಲಿದೆ. 29ರಂದು ಬೆಳಿಗ್ಗೆ ಅಭಿಷೇಕ, ಅರ್ಚನೆ ಹಾಗೂ ತೊಟ್ಟಿಲ ಪೂಜೆ ನಂತರ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ. 30ರಂದು ಅಮ್ಮನವರ ರಥೋತ್ಸವದ ಪ್ರಯುಕ್ತ ಸುಮಂಗಲಿಯರಿಂದ ತಂಬಿಟ್ಟಿನ ಆರತಿ ಮತ್ತು ಮಡ್ಲಕ್ಕಿ ಸೇವೆ ನಡೆಯಲಿದ್ದು, ರಥೋತ್ಸವದ ನಂತರ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ ಎಂದು ಅರ್ಚಕರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.