ADVERTISEMENT

ಹೊನ್ನಾಳಿ: ಅಗ್ನಿ ಸುರಕ್ಷತಾ ಸಪ್ತಾಹ: ಪ್ರಾತ್ಯಕ್ಷಿಕೆ, ಅಣಕು ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2025, 13:10 IST
Last Updated 15 ಏಪ್ರಿಲ್ 2025, 13:10 IST
ಹೊನ್ನಾಳಿ ತಾಲ್ಲೂಕಿನ ಸೊರಟೂರು ಗ್ರಾಮದಲ್ಲಿ ಅಗ್ನಿ ಸುರಕ್ಷತಾ ಸಪ್ತಾಹದ ಅಂಗವಾಗಿ ಅಗ್ನಿ ಸುರಕ್ಷತೆ ಕುರಿತು ಪ್ರಾತ್ಯಕ್ಷಿಕೆ ಹಾಗೂ ಅಣುಕು ಪ್ರದರ್ಶನವನ್ನು ಠಾಣಾಧಿಕಾರಿ ಪರುಶುರಾಮಪ್ಪ ನಡೆಸಿಕೊಟ್ಟರು
ಹೊನ್ನಾಳಿ ತಾಲ್ಲೂಕಿನ ಸೊರಟೂರು ಗ್ರಾಮದಲ್ಲಿ ಅಗ್ನಿ ಸುರಕ್ಷತಾ ಸಪ್ತಾಹದ ಅಂಗವಾಗಿ ಅಗ್ನಿ ಸುರಕ್ಷತೆ ಕುರಿತು ಪ್ರಾತ್ಯಕ್ಷಿಕೆ ಹಾಗೂ ಅಣುಕು ಪ್ರದರ್ಶನವನ್ನು ಠಾಣಾಧಿಕಾರಿ ಪರುಶುರಾಮಪ್ಪ ನಡೆಸಿಕೊಟ್ಟರು    

ಹೊನ್ನಾಳಿ: ತಾಲ್ಲೂಕಿನ ಸೊರಟೂರು ಗ್ರಾಮದಲ್ಲಿ ಅಗ್ನಿ ಸುರಕ್ಷತಾ ಸಪ್ತಾಹದ ಅಂಗವಾಗಿ ಅಗ್ನಿಶಾಮಕ ಠಾಣೆ ವತಿಯಿಂದ ಅಗ್ನಿ ಸುರಕ್ಷತೆ ಕುರಿತು ಪ್ರಾತ್ಯಕ್ಷಿಕೆ ಹಾಗೂ ಅಣುಕು ಪ್ರದರ್ಶನ ಸೋಮವಾರ ನಡೆಯಿತು. 

ಅಗ್ನಿ ಅವಘಡ ಸಂಭವಿಸಿದಾಗ ಅದು ಗಾಳಿಯಲ್ಲಿ ಹರಡದಂತೆ ಮೊದಲು ನಿಯಂತ್ರಿಸಬೇಕು ಎಂದು ಅಗ್ನಿಶಾಮಕ ಠಾಣಾಧಿಕಾರಿ ಟಿ.ಆರ್. ಪರುಶುರಾಮಪ್ಪ ಸಲಹೆ ನೀಡಿದರು.

ಅಡುಗೆ ಅನಿಲ (ಸಿಲಿಂಡರ್) ಹೊತ್ತಿ ಉರಿಯುತ್ತಿರುವಾಗ ಅದನ್ನು ನಿಯಂತ್ರಿಸುವ ಬಗೆಯನ್ನು ಪ್ರಾತ್ಯಕ್ಷಿಕೆ ಮೂಲಕ ತೋರಿಸಿಕೊಟ್ಟರು.

ADVERTISEMENT

ಸಿಲಿಂಡರ್‌ನಿಂದ ಬೆಂಕಿಯ ಕೆನ್ನಾಲಿಗೆ ಚಾಚದಂತೆ ಹಸಿಬಟ್ಟೆಯಿಂದ ಸಿಲಿಂಡರ್ ಅನ್ನು ಸುತ್ತಬೇಕು ಇಲ್ಲವೇ ದೊಡ್ಡ ಪಾತ್ರೆ, ಬಕೆಟ್‍ಗಳನ್ನು ಬಳಸಿ ಸಿಲಿಂಡರ್ ಮುಚ್ಚುವಂತೆ ಮಾಡಬೇಕು ಎಂದು ವಿವರಿಸಿದರು.

ಅಗ್ನಿಶಾಮಕ ಠಾಣೆ ಸಿಬ್ಬಂದಿ ಗದ್ದಿಗೇಶ್, ನಿರಂಜನ್, ವಿನಯ್, ಶ್ರೀನಿವಾಸ್, ಲೋಕೇಶ್ ಹಾಗೂ ಗ್ರಾಮದ ಮುಖಂಡರು ಈ ಸಂದರ್ಭದಲ್ಲಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.