
ನ್ಯಾಮತಿ: ‘ತಾಲ್ಲೂಕಿನಲ್ಲಿ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳು ನಡೆದಿವೆ. ಬಾಕಿ ಇರುವ ಅಭಿವೃದ್ಧಿ ಕಾಮಗಾರಿಗಳಿಗೆ ಆದ್ಯತೆ ನೀಡಲಾಗುವುದು’ ಎಂದು ಶಾಸಕ ಡಿ.ಜಿ.ಶಾಂತನಗೌಡ ಭರವಸೆ ನೀಡಿದರು.
ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪಕ್ಕದಲ್ಲಿ ₹ 3 ಕೋಟಿ ಅಂದಾಜು ಮೊತ್ತದಲ್ಲಿ ಅಗ್ನಿಶಾಮಕ ಠಾಣೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
‘ಅಗ್ನಿಶಾಮಕ ಠಾಣೆ ಕಾಮಗಾರಿಗೆ ಸರ್ಕಾರದ ಹಂತದಲ್ಲಿ ಪ್ರಯತ್ನಿಸಿ ಮಂಜೂರು ಮಾಡಿಸಿದ್ದು, ಅಗ್ನಿಶಾಮಕ ಕಟ್ಟಡ ನಿರ್ಮಾಣವಾಗಲಿದೆ. ಮುಂದಿನ ದಿನಗಳಲ್ಲಿ ರಸ್ತೆ ನಿರ್ಮಾಣ ಮಾಡಲಾಗುವುದು’ ಎಂದರು.
ಸರ್ಕಾರಿ ಸಾರಿಗೆ ಬಸ್‌ಗಳ ಸಂಚಾರವನ್ನು ಹೆಚ್ಚಿಸುವಂತೆ ಕಾಂಗ್ರೆಸ್ ಯುವ ಮುಖಂಡರು ಶಾಸಕರ ಗಮನಕ್ಕೆ ತಂದಾಗ ಆದಷ್ಟು ಬೇಗ ನ್ಯಾಮತಿಯಲ್ಲಿ ಡಿಪೋ ವ್ಯವಸ್ಥಾಪಕರ ಸಭೆ ಕರೆದು ತೀರ್ಮಾನ ಕೈಗೊಳ್ಳುವ ಭರವಸೆ ನೀಡಿದರು.
ಹೊಸದುರ್ಗ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಮಹಮ್ಮದ್ ಇಸ್ಮಾಯಿಲ್, ಮುಖಂಡರಾದ ಜಿ.ರಾಜೇಂದ್ರ ಮತ್ತು ಹೊಸಮನೆ ಮಲ್ಲಿಕಾರ್ಜುನ ಮಾತನಾಡಿದರು.
ಎಂಜಿನಿಯರ್ ಶ್ರುತಿ, ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ಎಂ.ಎನ್.ನಾಗೇಶ್, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ವಸಂತಕುಮಾರ, ಹೊನ್ನಾಳಿ ಅಗ್ನಿಶಾಮಕ ಠಾಣಾಧಿಕಾರಿ ಟಿ.ಆರ್.ಪರಶುರಾಮಪ್ಪ, ಪ್ರಮುಖರಾದ ಬಸವರಾಜ ಬಿ. ಅಕ್ಕಣ್ಣನವರ, ಲಿಂಗರಾಜ, ಭೀಮಸೇನ, ಗಂಗಾನಾಯ್ಕ, ಜಿ.ಎಂ.ವಿನಯ, ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲ ಡಿ.ಶಿವಕುಮಾರ, ಮುಖಂಡರಾದ ಕೋಡಿಕೊಪ್ಪ ಶಿವಪ್ಪ, ಎನ್.ಕೆ.ವೇದಮೂರ್ತಿ, ಎನ್.ಡಿ.ಪಂಚಾಕ್ಷರಪ್ಪ, ಬುಡ್ಡಪ್ಪ, ರೆಡ್ಡಿ ಸುರೇಶ, ಎಂ.ನಿತಿನ್, ಎಂ.ಮಿಥುನ, ಯತೀಶ ಗಾದೇರ, ವಾಲ್ಮೀಕಿ ಷಣ್ಮುಖ, ಸುನೀತಾ, ಶಾಂತಮ್ಮ, ಜಿ.ಲೋಕೇಶ, ರವಿ ತೋಂಟದಾರ್ಯ, ಸೋಮಶೇಖರಪ್ಪ, ಪುರೋಹಿತ ಪವನಕುಮಾರ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.