ನ್ಯಾಮತಿ: ‘ವಿದ್ಯಾರ್ಥಿ ದೆಸೆಯಲ್ಲಿ ಮುಂದಿನ ತಮ್ಮ ಭವಿಷ್ಯದ ಬಗ್ಗೆ ಏನಾದರೂ ಸಾಧನೆ ಮಾಡುವೆ ಎಂಬ ಛಲ ಇರಬೇಕು’ ಎಂದು ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಕಳೆದ ಸಾಲಿನ ವಿವಿಧ ಚಟುವಟಿಕೆಗಳ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಪ್ರಸುತ್ತ ದಿನಮಾನಗಳಲ್ಲಿ ಶೈಕ್ಷಣಿಕ ಪ್ರಗತಿಯಲ್ಲಿ ವಿದ್ಯಾರ್ಥಿನಿಯರು ಮುಂದಿದ್ದಾರೆ. ಯುವಕರು ಸಹ ಛಲದಿಂದ ಓದಿ ಹೆಚ್ಚಿನ ಸಾಧನೆ ಮಾಡುವಂತೆ’ ಕಿವಿಮಾತು ಹೇಳಿದರು.
‘ವಿದ್ಯಾರ್ಥಿಗಳು ತಾವು ಕಾನೂನು ಪಾಲನೆ ಮಾಡುವುದರ ಜೊತೆಗೆ ಸಮಾಜದಲ್ಲಿ ಕಾನೂನಿನ ಅರಿವು ಮೂಡಿಸಬೇಕು. ದುಶ್ಚಟಗಳಿಂದ, ಅಪರಾಧ ಕೃತ್ಯಗಳಿಂದ ದೂರವಿರುವಂತೆ’ ಪೊಲೀಸ್ ಇನ್‌ಸ್ಪೆಕ್ಟರ್ ಎನ್.ಎಸ್.ರವಿ ಸಲಹೆ ನೀಡಿದರು.
ಬಸವಾಪಟ್ಟಣ ಜನತಾ ಪ್ರೌಢಶಾಲೆ ಹವ್ಯಾಸಿ ಜನಪದ ಕಲಾವಿದ ಬಿ.ಎಂ.ಜಯಣ್ಣ ಅವರು ಹಲವು ಜನಪದ ಗೀತೆ ಮತ್ತು ಕವನಗಳನ್ನು ಹಾಡುತ್ತ ಕನ್ನಡ ಸಾಹಿತ್ಯದ ಮಹತ್ವವನ್ನು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಟಿ.ಸಿ.ಭಾರತಿ ಅಧ್ಯಕ್ಷತೆ ವಹಿಸಿದ್ದರು.
ವಿವಿಧ ಘಟಕಗಳ ಮುಖ್ಯಸ್ಥರಾದ ಎನ್.ಜ್ಯೋತಿ, ಎಂ.ಎಸ್.ಗಿರೀಶ, ಜಿ.ಪಿ.ರಾಘವೇಂದ್ರ, ಎಸ್.ಎಚ್.ಚಂದ್ರಪ್ಪ, ಜಿ.ಆರ್.ರಾಜಶೇಖರ, ಡಿ.ಶಿವಕುಮಾರ ಹಾಗೂ ಕಾಲೇಜು ಅಭಿವೃದ್ದಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.