ADVERTISEMENT

ದಾವಣಗೆರೆಯಲ್ಲಿ ವೃದ್ಧೆಯರಿಬ್ಬರು ಸೇರಿ ನಾಲ್ವರಿಗೆ ಕೋವಿಡ್‌-19 ದೃಢ

​ಪ್ರಜಾವಾಣಿ ವಾರ್ತೆ
Published 24 ಮೇ 2020, 9:45 IST
Last Updated 24 ಮೇ 2020, 9:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ದಾವಣಗೆರೆ: ಜಿಲ್ಲೆಯಲ್ಲಿ ವೃದ್ಧೆಯರಿಬ್ಬರು ಸೇರಿ ನಾಲ್ವರು ಮಹಿಳೆಯರಿಗೆ ಕೋವಿಡ್‌–19 ಇರುವುದನ್ನು ಭಾನುವಾರ ಬಂದ ವೈದ್ಯಕೀಯ ವರದಿ ಖಚಿತಪಡಿಸಿದೆ.

60 ವರ್ಷದ ವೃದ್ಧೆ (ಪಿ.1962), 70 ವರ್ಷದ ವೃದ್ಧೆ (ಪಿ.1992) ಈ ಇಬ್ಬರಿಗೆ ಕಂಟೈನ್‌ಮೆಂಟ್ ವಲಯದ ಸಂಪರ್ಕದಿಂದ ಸೋಂಕು ತಗಲಿದೆ.
ಜಾಲಿನಗರದ 48 ವರ್ಷದ ಸೋಂಕಿತ ವ್ಯಕ್ತಿಯ (ಪಿ.1251) ಸಂಪರ್ಕದಿಂದ 33 ವರ್ಷದ ಇಬ್ಬರು ಮಹಿಳೆಯರಿಗೆ (ಪಿ.1963, ಪಿ.1964) ಕೊರೊನಾ ಸೋಂಕು ತಗುಲಿದೆ.

ಜಿಲ್ಲೆಯಲ್ಲಿ ಕೋವಿಡ್‌ ಪ್ರಕರಣದ ಸಂಖ್ಯೆ 125ಕ್ಕೆ ಏರಿಕೆಯಾಗಿದೆ. ಇದುವರೆಗೆ ಒಟ್ಟು 28 ಜನ ಗುಣಮುಖವಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 18 ಮಂದಿ ಭಾನುವಾರ ಸಂಜೆ ಬಿಡುಗಡೆ ಆಗಲಿದ್ದಾರೆ. ಕೋವಿಡ್‌ನಿಂದ ನಾಲ್ವರು ಮೃತಪಟ್ಟಿದ್ದಾರೆ. ಸದ್ಯ 75 ಕೋವಿಡ್‌ ಸಕ್ರಿಯ ಪ್ರಕರಣಗಳಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.