ADVERTISEMENT

ತೆಪ್ಪದಲ್ಲಿ ಗಡ್ಡೆ ರಾಮೇಶ್ವರಸ್ವಾಮಿ ಉತ್ಸವ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2022, 6:20 IST
Last Updated 6 ಅಕ್ಟೋಬರ್ 2022, 6:20 IST
ನ್ಯಾಮತಿ ತಾಲ್ಲೂಕಿನ ಕುರುವ ಗಡ್ಡೆರಾಮೇಶ್ವರ ಮತ್ತು ಆಂಜನೇಯಸ್ವಾಮಿ ಉತ್ಸವಮೂರ್ತಿಗಳನ್ನು ತೆಪ್ಪದಲ್ಲಿ ಮೆರವಣಿಗೆ ಮಾಡಲಾಯಿತು
ನ್ಯಾಮತಿ ತಾಲ್ಲೂಕಿನ ಕುರುವ ಗಡ್ಡೆರಾಮೇಶ್ವರ ಮತ್ತು ಆಂಜನೇಯಸ್ವಾಮಿ ಉತ್ಸವಮೂರ್ತಿಗಳನ್ನು ತೆಪ್ಪದಲ್ಲಿ ಮೆರವಣಿಗೆ ಮಾಡಲಾಯಿತು   

ಕುರುವ (ನ್ಯಾಮತಿ): ಇಲ್ಲಿನ ಗಡ್ಡೆ ರಾಮೇಶ್ವರಸ್ವಾಮಿ ದಸರಾ ಬನ್ನಿ ಮಹೋತ್ಸವ ಬುಧವಾರ ವಿಜೃಂಭಣೆಯಿಂದ ಜರುಗಿತು.

ಕುರುವ ಆರ್ಚಕ ಕುಮಾರಭಟ್ಟರ ಮನೆಯಲ್ಲಿ ಒಂಬತ್ತು ದಿನ ದೀಪಾರಾಧನೆಯಲ್ಲಿ ಪ್ರತಿಷ್ಠಾಪನೆಗೊಂಡ ರಾಮೇಶ್ವರಸ್ವಾಮಿ ಮತ್ತು ಆಂಜನೇಯಸ್ವಾಮಿ ಮೂರ್ತಿಗಳು ವಿಜಯದಶಮಿಯಂದು ಬನ್ನಿ ಉತ್ಸವದಲ್ಲಿಪಾಲ್ಗೊಂಡವು.

ತುಂಗಭದ್ರಾ ನದಿಯಲ್ಲಿ ತೆಪ್ಪದಲ್ಲಿ ಗಡ್ಡೆರಾಮೇಶ್ವರ ಮೂರ್ತಿಯನ್ನು ತಂದು ಮರಳಿ ಕುರುವ ಗ್ರಾಮಕ್ಕೆ ಮೆರವಣಿಗೆಯಲ್ಲಿ ಕರೆದೊಯ್ಯಲಾಯಿತು. ಇದು ಪೂರ್ವಜರ ಕಾಲದಿಂದಲೂ ನಡೆದುಕೊಂಡು ಬಂದ ಪದ್ಧತಿ ಎಂದು ಗಡ್ಡೆ ರಾಮೇಶ್ವರ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸುರೇಶ ನವುಲೆ ತಿಳಿಸಿದರು.

ADVERTISEMENT

ಆರ್ಚಕರಾದ ಕುಮಾರಭಟ್ಟ, ರಾಮಭಟ್ಟ, ಸಮಿತಿಯ ಗೌರವಾಧ್ಯಕ್ಷ ಹಾಗೂ ಸದಸ್ಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.