ADVERTISEMENT

ಸಾಸ್ವೆಹಳ್ಳಿ: ಬರೋಬ್ಬರಿ 32 ಕೆ.ಜಿ ತೂಕದ ಮೀನು ಬಲೆಗೆ

​ಪ್ರಜಾವಾಣಿ ವಾರ್ತೆ
Published 4 ಜನವರಿ 2026, 4:32 IST
Last Updated 4 ಜನವರಿ 2026, 4:32 IST
 32 ಕೆ.ಜಿ ತೂಕದ ಮೀನು
 32 ಕೆ.ಜಿ ತೂಕದ ಮೀನು   

ಸಾಸ್ವೆಹಳ್ಳಿ: ಗ್ರಾಮದ ತುಂಗಾಭದ್ರ ನದಿಯಲ್ಲಿ ಮೀನುಗಾರರ ಬಲೆಗೆ ಬರೋಬ್ಬರಿ 32 ಕೆಜಿಯ ಮತ್ತು 19 ಕೆ.ಜಿ ತೂಕದ ಬೃಹತ್ ಗಾತ್ರದ ಹದ್ದಿನ ಜಾತಿಗೆ ಸೇರಿದ ಎರಡು ಮೀನುಗಳು ಬಿದ್ದಿವೆ.

ಅಂಬೇಡ್ಕರ್ ವೃತ್ತದಲ್ಲಿ ಬೃಹತ್ ಗಾತ್ರದ ಮೀನುಗಳು ಜನಾಕರ್ಷಣೆಯ ಕೇಂದ್ರವಾಗಿತ್ತು. ಭದ್ರಾವತಿಯ ಯಕ್ವಲ್, ಮಣಿ, ಬಾಬು, ಅಯ್ಯಪ್ಪ ಎಂಬ ನಾಲ್ವರು ಮೀನುಗಾರರು ಗ್ರಾಮದ ಸಮೀಪದಲ್ಲಿ ಹರಿಯುವ ತುಂಗಭದ್ರಾ ನದಿಯಲ್ಲಿ ಬೀಸಿದ ಬಲೆಗೆ ಕಲ್ಲಿನ ಪೊಟರೆಗಳಲ್ಲಿ ವಾಸಿಸುವ ಹದ್ದಿನ ಜಾತಿಗೆ ಸೇರಿದ ಎರಡು ಮೀನುಗಳು ಸಿಲುಕಿವೆ.

ಈ ಮೀನುಗಳು ಸಿಕ್ಕಿದ್ದರಿಂದಾಗಿ ಮೀನುಗಾರರ ಸಂತಸಕ್ಕೆ ಪಾರವೇ ಇರಲಿಲ್ಲ. ದೊಡ್ಡ ಗಾತ್ರದ ಮೀನುಗಳನ್ನು  ಬಲೆಯಿಂದ ಮೇಲೆತ್ತಲು ಹರಸಾಹಸ ಪಟ್ಟು ಕೊನೆಗೆ ನದಿಯಿಂದ ದಡಕ್ಕೆ ತಂದಿದ್ದಾರೆ.

ADVERTISEMENT
ಹದ್ದಿನ ಜಾತಿಗೆ ಸೇರಿದ ಮೀನು

ಮೀನುಗಾರರು ಬೀಸುವ ಬಲೆಗೆ ಹದ್ದಿನ ಜಾತಿಯ ಮೀನುಗಳು ಬೀಳುವುದು ಅಪರೂಪದಲ್ಲಿ ಅಪರೂಪ. ಇವು ಕಲ್ಲಿನ ಪೊಟರೆಯಲ್ಲಿ ವಾಸಿಸುತ್ತವೆ. ಏಡಿ, ಹಾವು ಸಣ್ಣ ಮೀನುಗಳನ್ನು ತಿಂದು ಬದುಕುತ್ತವೆ ಎನ್ನುತ್ತಾರೆ ರಾಂಪುರದ ಮೆಹಬೂಬ್ ಸಾಬ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.