ADVERTISEMENT

ಮನೆ– ಮನೆಗೆ ಪೊಲೀಸ್ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ: ಚನ್ನಬಸಪ್ಪ ಹೊಳಿ

​ಪ್ರಜಾವಾಣಿ ವಾರ್ತೆ
Published 22 ಜುಲೈ 2025, 5:14 IST
Last Updated 22 ಜುಲೈ 2025, 5:14 IST
ನ್ಯಾಮತಿ ತಾಲ್ಲೂಕು ಮುಸ್ಸೆನಾಳ್ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಸಾಮಾಜಿಕ ಪರಿಶೋಧನಾ ಮತ್ತು ಪೋಷಕರ ಸಭೆ ಮನೆ ಮನೆಗೆ ಪೊಲೀಸ್ ಕಾರ್ಯಕ್ರಮವನ್ನು ಮುಖಂಡರಾದ ಜಿ.ಶಿವರಾಮನಾಯ್ಕ ಉದ್ಘಾಟಿಸಿದರು.
ನ್ಯಾಮತಿ ತಾಲ್ಲೂಕು ಮುಸ್ಸೆನಾಳ್ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಸಾಮಾಜಿಕ ಪರಿಶೋಧನಾ ಮತ್ತು ಪೋಷಕರ ಸಭೆ ಮನೆ ಮನೆಗೆ ಪೊಲೀಸ್ ಕಾರ್ಯಕ್ರಮವನ್ನು ಮುಖಂಡರಾದ ಜಿ.ಶಿವರಾಮನಾಯ್ಕ ಉದ್ಘಾಟಿಸಿದರು.   

ಮುಸ್ಸೆನಾಳ್ (ನ್ಯಾಮತಿ): ಪೊಲೀಸ್ ಇಲಾಖೆಯ ಮಹತ್ತರ ಯೋಜನೆ ಮನೆ ಮನೆಗೆ ಪೊಲೀಸ್ ಕಾರ್ಯಕ್ರಮಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ಸಿಗುತ್ತಿದೆ ಎಂದು ನ್ಯಾಮತಿ ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ ಚನ್ನಬಸಪ್ಪ ಹೊಳಿ ತಿಳಿಸಿದರು.


ತಾಲ್ಲೂಕಿನ ಮುಸ್ಸೆನಾಳ್ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಸಾಮಾಜಿಕ ಪರಿಶೋಧನಾ ಮತ್ತು ಪೋಷಕರ ಸಭೆ ಮನೆ ಮನೆಗೆ ಪೊಲೀಸ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.


ಪೊಲೀಸ್ ಇಲಾಖೆಯೊಂದಿಗೆ ಗ್ರಾಮಸ್ಥರು ಸಹಕರಿಸುವ ಮೂಲಕ ಕಾನೂನು ಬಾಹಿರ ಚಟುವಟಿಕೆ, ಕಳವು ಪ್ರಕರಣಗಳನ್ನು ಪತ್ತೆ ಹಚ್ಚಲು ಅನುಕೂಲವಾಗುತ್ತದೆ. ಬಾಲ್ಯವಿವಾಹ, ಬಾಲ ಕಾರ್ಮಿಕg ನೇಮಕ ಮಾಡಿಕೊಳ್ಳುವುದು ಅಪರಾಧವಾಗುತ್ತದೆ. ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ ಎಂದರು.

ADVERTISEMENT


ತಾಲ್ಲೂಕು ಪಂಚಾಯಿತಿ ಸಾಮಾಜಿಕ ಪರಿಶೋಧನೆ ವ್ಯವಸ್ಥಾಪಕ ಸಿ.ಸಿದ್ದೇಶ, ದೇವರಾಜ, ಮಂಜುನಾಥ ಶಾಲೆಯ ೨೦೨೩-೨೪ನೇ ಸಾಲಿನ ಸಾಮಾಜಿಕ ಪರಿಶೋಧನಾ ನಡೆಸಿ ವರದಿ ನೀಡಿದರು.


ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಜಿ.ಶಿವರಾಮನಾಯ್ಕ, ಶಾಲೆಯ ಮುಖ್ಯಶಿಕ್ಷಕಿ ವೈ.ಕೆ.ವನಿತಾ, ಶಿಕ್ಷಕ ಡಿ.ಯಲ್ಲಪ್ಪ, ಎಸ್‌ಡಿಎಂಸಿ ಅಧ್ಯಕ್ಷ ಗೋವಿಂದಪ್ಪ, ಉಪಾಧ್ಯಕ್ಷೆ ಇಂದ್ರಬಾಯಿ, ಹೆಡ್ ಕಾನ್‌ಸ್ಟೇಬಲ್ ಉಮೇಶ, ಗ್ರಾಮ ಪಂಚಾಯಿತಿ ಸದಸ್ಯರಾದ ಪ್ರಕಾಶನಾಯ್ಕ, ಶಶಿಕಲಾಬಾಯಿ, ಪಿಡಿಒ ಸೋಮಶೇಖರ, ಶಂಕ್ರನಾಯ್ಕ, ಮಂಜನಾಯ್ಕ, ಪ್ರೇಮ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.