ADVERTISEMENT

ದಾವಣಗೆರೆ: ಸರ್ಕಾರಿ ನೌಕರರ ಚೆಸ್‌ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2021, 4:11 IST
Last Updated 24 ಅಕ್ಟೋಬರ್ 2021, 4:11 IST
ರಾಜ್ಯ ಸರ್ಕಾರಿ ನೌಕರರ ಚೆಸ್‌ ಸ್ಪರ್ಧೆ ದಾವಣಗೆರೆ ಮೋತಿವೀರಪ್ಪ ಕಾಲೇಜಿನಲ್ಲಿ ನಡೆಯಿತು.
ರಾಜ್ಯ ಸರ್ಕಾರಿ ನೌಕರರ ಚೆಸ್‌ ಸ್ಪರ್ಧೆ ದಾವಣಗೆರೆ ಮೋತಿವೀರಪ್ಪ ಕಾಲೇಜಿನಲ್ಲಿ ನಡೆಯಿತು.   

ದಾವಣಗೆರೆ: ರಾಜ್ಯ ಸರ್ಕಾರಿ ನೌಕರರ ಚೆಸ್‌ ಸ್ಪರ್ಧೆ ನಗರದ ಮೋತಿವೀರಪ್ಪ ಕಾಲೇಜಿನಲ್ಲಿ ನಡೆಯಿತು. ಪುರುಷರ ವಿಭಾಗದಲ್ಲಿ ವೀರೇಶ್ ಟಿ. ಚಿತ್ರದುರ್ಗ ಮತ್ತು ಮಹಿಳೆಯರ ವಿಭಾಗದಲ್ಲಿ ಪ್ರೇಮ ಬೆಂಗಳೂರು ಪ್ರಥಮ ಸ್ಥಾನ ಗಳಿಸಿದರು.

ಪುರುಷರ ವಿಭಾಗದಲ್ಲಿ ಕಾಂತರಾಜ್ ಎನ್. ಚಿಕ್ಕಮಗಳೂರು, ವಿನಾಯಕ್ ಬಿ. ಹರಿಲಾಲ್ ಶಿವಮೊಗ್ಗ, ವಿಶ್ವನಾಥ್ ಎಸ್.ಪಿ. ಚಾಮರಾಜನಗರ, ಚಂದ್ರಶೇಖರ್ ಆರ್.ಜೆ ತುಮಕೂರು ಅವರು 2ರಿಂದ 5ನೇ ಸ್ಥಾನದವರೆಗೆ ಪಡೆದರು.

ಮಹಿಳೆಯರ ವಿಭಾಗದಲ್ಲಿ ಅಶ್ವಿನಿ ಕುಲಕರ್ಣಿ ವಿಜಯಪುರ, ಸುಜಾತಾ ವೈ. ಬಳ್ಳಾರಿ, ಆಶಾ ಟಿ. ಚಿತ್ರದುರ್ಗ, ಜಯಶ್ರೀ ಕೆ.ಜಿ. ಬೆಂಗಳೂರು ಐದರವರೆಗಿನ ಸ್ಥಾನಗಳನ್ನು ಪಡೆದರು

ADVERTISEMENT

ಇಲ್ಲಿನ ವಿಜೇತರು ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಶಾಲಾ ಶಿಕ್ಷಕರು ಮತ್ತು ದಾವಣಗೆರೆ ಜಿಲ್ಲಾ ಚೆಸ್ ಅಸೋಸಿಯೇಶನ್ ಕಾರ್ಯದರ್ಶಿ ಯುವರಾಜ್ ಪಂದ್ಯಾವಳಿಯ ತೀರ್ಪುಗಾರರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.