
ಪ್ರಜಾವಾಣಿ ವಾರ್ತೆ
ಮಲೇಬೆನ್ನೂರು: ಸಮೀಪದ ಆದಾಪುರ ಗ್ರಾಮದ ಗ್ರಾಮ ದೇವತೆಯ ರಾಜಬೀದಿ ಉತ್ಸವ ಮಂಗಳವಾರ ತಡರಾತ್ರಿ ವೈಭವದಿಂದ ಜರುಗಿತು.
ಟ್ರ್ಯಾಕ್ಟರ್‌ಗಳಲ್ಲಿ ಅಲಂಕರಿಸಿದ ದುರ್ಗಮ್ಮ, ಕರಿಯಮ್ಮ ಹಾಗೂ ಆಂಜನೇಯ ಸ್ವಾಮಿ ದೇವರುಗಳ ಉತ್ಸವವನ್ನು ಭಕ್ತರು ಕಣ್ತುಂಬಿಕೊಂಡರು.
ಮಂಗಳವಾದ್ಯ, ತಮಟೆ, ಡೊಳ್ಳು, ನಾಸಿಕ್ ಡೋಲು, ಭಜನಾ ತಂಡಗಳು ಉತ್ಸವದ ಕಳೆ ಹೆಚ್ಚಿಸಿದವು.
ಮಕ್ಕಳು, ಹಿರಿಯರು ಯುವಪಡೆ ಉತ್ಸಾಹದಿಂದ ಪಾಲ್ಗೊಂಡಿದ್ದರು. ಗ್ರಾಮದ ಬೀದಿಗಳು ಝಗಮಗಿಸಿದವು. ದೇವಾಲಯವನ್ನು ವಿವಿಧ ಬಗೆಯ ಹೂವಿಗಳಿಂದ ಅಲಂಕರಿಸಲಾಗಿತ್ತು.
ಸುತ್ತಮುತ್ತಲ ಗ್ರಾಮಗಳಿಂದ ಹೆಚ್ಚಿನ ಸಂಖ್ಯೆಯ ಜನತೆ ಆಗಮಿಸಿದ್ದರು. ಮುಂಗಾರು ಪೂರ್ವ ಮಳೆ ಸ್ವಲ್ಪ ಸಮಯ ಸುರಿದ ಕಾರಣ ಧಗೆ ತಣಿಸಿತು. ಪೊಲೀಸರು ಭದ್ರತೆ ಒದಗಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.