ADVERTISEMENT

ದಾವಣಗೆರೆ: ಮಾಲೀಕನಿಂದಲೇ ಹಮಾಲಿ ಕೊಲೆ ಆರೋಪ; ಅಂಗಡಿಯ ಗಾಜು ಪುಡಿ

ಎಪಿಎಂಸಿ ಈರುಳ್ಳಿ ಮಾರುಕಟ್ಟೆ ಬಂದ್ ಮಾಡಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 4 ಮೇ 2019, 9:31 IST
Last Updated 4 ಮೇ 2019, 9:31 IST
ದಾವಣಗೆರೆಯ ಈರುಳ್ಳಿ ಮಾರುಕಟ್ಟೆಯ ಬಳಿ ಮೃತ್ಯುಂಜಯ ಅವರಿಗೆ ಸೇರಿದ ಹಲಗೇರಿ ಅಂಡ್‌ ಗುರಣ್ಣ ಅಂಡ್ ಸನ್ಸ್‌ ಅಂಗಡಿಯ ಪೀಠೋಪಕರಣಗಳನ್ನು ಧ್ವಂಸಗೊಳಿಸಿರುವುದು
ದಾವಣಗೆರೆಯ ಈರುಳ್ಳಿ ಮಾರುಕಟ್ಟೆಯ ಬಳಿ ಮೃತ್ಯುಂಜಯ ಅವರಿಗೆ ಸೇರಿದ ಹಲಗೇರಿ ಅಂಡ್‌ ಗುರಣ್ಣ ಅಂಡ್ ಸನ್ಸ್‌ ಅಂಗಡಿಯ ಪೀಠೋಪಕರಣಗಳನ್ನು ಧ್ವಂಸಗೊಳಿಸಿರುವುದು   

ದಾವಣಗೆರೆ: ಮಾಲೀಕನೇ ಹಮಾಲಿಯನ್ನು ಕೊಲೆ ಮಾಡಿದ್ದಾನೆ ಎಂದು ಆರೋಪಿಸಿ ದಾವಣಗೆರೆಯ ಎಪಿಎಂಸಿ ಈರುಳ್ಳಿ ಮಾರುಕಟ್ಟೆಯನ್ನು ಬಂದ್ ಮಾಡಿ ಶನಿವಾರ ಪ್ರತಿಭಟನೆ ನಡೆಸಿದರು.

ಬಸಾಪುರದ ವೀರೇಶ್‌ (38) ಮೃತಪಟ್ಟವರರು. ಹಲಗೇರಿ ಗುರಣ್ಣ ಅಂಡ್ ಸನ್ಸ್‌ ಅಂಗಡಿ ಮಾಲೀಕ ಮೃತ್ಯುಂಜಯ ಹಾಗೂ ಬಸವೇಶ ಎಂಬುವರು ಸೇರಿ ಕೊಲೆ ಮಾಡಿ ಕಾರಿನಲ್ಲಿ ಸುಟ್ಟು ಹಾಕಿದ್ದಾರೆ ಎಂದು ಆರೋಪಿಸಿದ ಹಮಾಲಿಗಳು ಎಪಿಎಂಸಿಯಲ್ಲಿರುವ ಅಂಗಡಿಯ ಮೇಲೆ ಕಲ್ಲು ತೂರಾಟ ನಡೆಸಿ ಗಾಜುಗಳನ್ನು ಪುಡಿ ಪುಡಿ ಮಾಡಿದರು. ಪೀಠೋಪಕರಣಗಳನ್ನು ಧ್ವಂಸಗೊಳಿಸಿದರು.

ಅಂಗಡಿ ಮುಂದೆ ಟೈರ್ ಸುಟ್ಟು ಪ್ರತಿಭಟನೆ ನಡೆಸಿದ ಹಮಾಲಿಗಳು ಮೃತ್ಯುಂಜಯ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು ಸೂಕ್ತ ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿದರು.

ADVERTISEMENT

‘ಏಪ್ರಿಲ್ 25ರಂದು ರಾತ್ರಿ ವೇಳೆ ಕೆಲಸ ಇದೆ ಎಂದು ವೀರೇಶ್‌ ಅವರನ್ನು ಕರೆದುಕೊಂಡು ಹೋಗಿ ಹಾವೇರಿ ಸಮೀಪದ ಹಲಗೇರಿ ಬಳಿ ಕಾರನ್ನು ಮರಕ್ಕೆ ಡಿಕ್ಕಿ ಹೊಡೆಸಿ ಬೆಂಕಿ ಹಚ್ಚಿ ಕೊಲೆ ಮಾಡಲಾಗಿದೆ’ ಎಂದು ಮೃತರ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಆರೋಪಿಯನ್ನು ಬಂಧಿಸಲಾಗಿದೆ. ವಿಮೆಯ ಹಣಕ್ಕಾಗಿ ಕೊಲೆ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.