ಹರಿಹರ: ಅಕ್ರಮ–ಸಕ್ರಮ ಯೋಜನೆಯಡಿ ಉಚಿತವಾಗಿ ಕಂಬ, ಟಿ.ಸಿ. ಅಳವಡಿಸಲು ರೈತರಿಗೆ ₹25,000 ಲಂಚಕ್ಕೆ ಬೇಡಿಕೆ ಇಟ್ಟ ಆರೋಪದ ಮೇಲೆ ತಾಲ್ಲೂಕಿನ ಬೆಳ್ಳೂಡಿಯ ಬೆಸ್ಕಾಂ ಶಾಖಾಧಿಕಾರಿ ವಿನಯ ಕುಮಾರ್ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.
ಲಂಚಕ್ಕೆ ಬೇಡಿಕೆ ಇಟ್ಟಿದ್ದು ಎನ್ನಲಾದ ಮೊಬೈಲ್ ಧ್ವನಿ ಮುದ್ರಿಕೆಯನ್ನು ಬೆಸ್ಕಾಂ ಗುತ್ತಿಗೆದಾರರಾದ ಭಾನುವಳ್ಳಿ ಮಂಜುನಾಥ ಮತ್ತು ಮಲ್ಲನಾಯಕನಹಳ್ಳಿ ಬಸವರಾಜ್ ಅವರು ನ.19 ರಂದು ಬಿಡುಗಡೆ ಮಾಡಿ ಕ್ರಮಕ್ಕೆ ಆಗ್ರಹಿಸಿದ್ದರು.
ಪ್ರಕರಣವನ್ನು ಪರಿಶೀಲಿಸಿದ ಬೆಸ್ಕಾಂ ದಾವಣಗೆರೆ ಸೂಪರಿಂಟೆಂಡೆಂಟ್ ಎಂಜಿಜಿನಿಯರ್ ಎಸ್.ಕೆ.ಪಾಟೀಲ್, ಅಮಾನತು ಆದೇಶ ಹೊರಡಿಸಿದ್ದಾರೆ.
ಹರಿಹರ ಬೆಸ್ಕಾಂ ಇಇ ಮತ್ತು ಎಇಇ ವಿರುದ್ಧವೂ ಆರೋಪ ಕೇಳಿ ಬಂದಿದ್ದು, ಅವರಿಬ್ಬರಿಗೂ ನೋಟಿಸ್ ಜಾರಿ ಮಾಡಲಾಗಿದೆ. ಈ ಕುರಿತು ಕ್ರಮಕ್ಕೆ ಕೋರಿ ಇಲಾಖೆಯ ಚಿತ್ರದುರ್ಗ ವಲಯ ಮುಖ್ಯ ಎಂಜಿನಿಯರ್‌ಗೆ ಪತ್ರ ಬರೆಯಲಾಗಿದೆ ಎಂದು ದಾವಣಗೆರೆ ಸೂಪರಿಂಟೆಂಡೆಂಟ್ ಎಂಜಿನಿಯರ್ ಎಸ್.ಕೆ.ಪಾಟೀಲ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.