ADVERTISEMENT

ಹರಿಹರ: ಆರೋಗ್ಯ ತಪಾಸಣಾ ಶಿಬಿರ ಇಂದು

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2025, 6:20 IST
Last Updated 5 ಸೆಪ್ಟೆಂಬರ್ 2025, 6:20 IST
ಹರಿಹರ: ಎಂ.ಬಿ.ಅಣ್ಣಪ್ಪ.  
ಹರಿಹರ: ಎಂ.ಬಿ.ಅಣ್ಣಪ್ಪ.     

ಹರಿಹರ: ಸಾರ್ವಜನಿಕ ವಿನಾಯಕ ಮಹೋತ್ಸವ ಸಮಿತಿಯಿಂದ ಗಣೇಶ ಪ್ರತಿಷ್ಠಾಪನೆ ನಿಮಿತ್ತ ಸೆ.5 ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಿದೆ ಎಂದು ಸಮಿತಿಯ ಅಧ್ಯಕ್ಷ ಎಂ.ಬಿ.ಅಣ್ಣಪ್ಪ ಹೇಳಿದರು.
ಗಣೇಶ ಪ್ರತಿಷ್ಠಾಪನೆಯ ನೆಪದಲ್ಲಿ ಜನಮುಖಿ ಚಟುವಟಿಕೆಗಳನ್ನು ನಡೆಸುವುದು ಉದ್ದೇಶವಾಗಿದೆ. ಕೆಲ ದಿನಗಳಹಿಂದೆ ಕವಿಗೋಷ್ಟಿಯನ್ನು ಯಶಸ್ವಿಯಾಗಿ ನಡೆಸಲಾಯಿತು.

ಈಗ ಗಾಂಧಿ ಮೈದಾನದಲ್ಲಿ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಿದೆ. ಅಂದು ಸಂಜೆ 5ಕ್ಕೆ ರಸಮಂಜರಿ ಕಾರ್ಯಕ್ರಮವಿದೆ ಸಾರ್ವಜನಿಕರು ಉಪಯೋಗ ಪಡೆದುಕೊಳ್ಳಲು ಬುಧವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕೋರಿದರು.


ಶಿಬಿರದಲ್ಲಿ ಹೃದಯ, ಕಿವಿ, ಮೂಗು, ಗಂಟಲು, ಚರ್ಮ, ನೋವಾ ಐವಿಎಫ್ ಬಂಜೆತನ ನಿವಾರಣೆ, ಜನರಲ್ ಮೆಡಿಸಿನ್, ಸಕ್ಕರೆ ಕಾಯಿಲೆ, ಶಸ್ತç ಚಿಕಿತ್ಸಾ ತಜ್ಞರು ಭಾಗವಹಿಸುವರು, ಇಸಿಜಿ, ರಕ್ತ, ಬಿ.ಪಿ. ಪರೀಕ್ಷೆ ನಡೆಸಲಾಗುವುದೆಂದು ನಿವೃತ್ತ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜಗನ್ನಾಥ ಹೇಳಿದರು.

ADVERTISEMENT


ಸೆ.6 ರಂದು ಗಣೇಶ ವಿಸರ್ಜನೆ ಇರಲಿದೆ, ಮೆರವಣಿಗೆಯಲ್ಲಿ ಡಿ.ಜೆ. ಸಂಗೀತದ ಬದಲು ಹುಬ್ಬಳ್ಳಿಯ ಜಗ್ಗ ಹಲಿಗೆ, ಮೊಳಕಾಲ್ಮೂರಿನ ಗೊಂಬೆ ಕುಣಿತ, ನಂದಿಕೋಲು, ವೀರಗಾಸೆ, ಡೊಳ್ಳು, ತಮಟೆ ಸೇರಿದಂತೆ ವಿವಿಧ ಕಲಾ ತಂಡಗಳ ಪ್ರದರ್ಶನ ಇರುತ್ತದೆ ಎಂದು ಸಮಿತಿಯ ಗೌರವಾಧ್ಯಕ್ಷ ನಂದಿಗಾವಿ ಶ್ರೀನಿವಾಸ್ ಹೇಳಿದರು.


ಪತ್ರಿಕಾಗೋಷ್ಟಿಯಲ್ಲಿ ಸಮಿತಿಯ ಪದಾಧಿಕಾರಿಗಳಾದ ಕೆ.ಬಿ.ರಾಜಶೇಖರ್, ತಿಪ್ಪೇಸ್ವಾಮಿ, ಎಂ.ಚಿದಾನAದ ಕಂಚಿಕೇರಿ, ಸಚಿನ್ ಕೊಂಡಜ್ಜಿ, ಹರೀಶ್ ಪಿ.ಎಚ್, ಮಂಜುನಾಥ್ ಬಿ, ನಾರಾಯಣ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.