ADVERTISEMENT

ಅಮೆರಿಕದಲ್ಲಿ ಪಂಪ ಕನ್ನಡ ಕೂಟ; ಹರಿಹರದ ಕಾರ್ಮಿಕ ಮುಖಂಡ ಎಚ್.ಕೆ.ಕೊಟ್ರಪ್ಪ ಭಾಗಿ

​ಪ್ರಜಾವಾಣಿ ವಾರ್ತೆ
Published 29 ಜುಲೈ 2025, 7:27 IST
Last Updated 29 ಜುಲೈ 2025, 7:27 IST
   

ಟ್ರಾಯ್ ನಗರ: ಅಮೆರಿಕದ ಮಿಚಿಗನ್ ರಾಜ್ಯದ ಟ್ರಾಯ್ ನಗರದಲ್ಲಿರುವ ಕನ್ನಡಿಗರು ಒಗ್ಗೂಡಿ ಆದಿ ಕವಿ ಪಂಪನ ನುಡಿಗೆ ಸ್ಪೂರ್ತಿಗೊಂಡು 'ಪಂಪ ಕನ್ನಡ ಕೂಟ' ಹಾಗೂ 'ಸಂತೋಷ ಕೂಟ' ಕಾರ್ಯಕ್ರಮ ಹಮ್ಮಿಕೊಂಡಿದ್ದರು.

ಈ ವರ್ಷದ ಸಂತೋಷ ಕೂಟದಲ್ಲಿ ಹರಿಹರದ ಕಾರ್ಮಿಕ ಮುಖಂಡ ಎಚ್ ಕೆ ಕೊಟ್ರಪ್ಪ , ಮಡದಿ , ಮಗ, ಸೊಸೆ ಮೊಮ್ಮಕ್ಕಳೊಂದಿಗೆ ಭಾಗವಹಿಸಿದ್ದರು.

ಕೊಟ್ರಪ್ಪ ಅವರನ್ನು ಅಲ್ಲಿಯ ಪದಾಧಿಕಾರಿಗಳು, ಆತ್ಮೀಯವಾಗಿ ಸ್ವಾಗತಿಸಿ, ಪಂಪ ಕನ್ನಡ ಕೂಟ ನಡೆಸಿಕೊಟ್ಟರು.

ADVERTISEMENT

ಪಂಪ ಕನ್ನಡ ಕೂಟವು ರಾಷ್ಟ್ರಮಟ್ಟದಲ್ಲಿ ಸಾಧನೆಗೈದಿರುವ ಕನ್ನಡದ ಗಣ್ಯರನ್ನು ಗುರುತಿಸಿ , 'ಪಂಪ ವರ್ಷದ ಕನ್ನಡಿಗ' ಪ್ರಶಸ್ತಿಯನ್ನು ಬೃಹತ್ ಸಮಾರಂಭದಲ್ಲಿ ವಿತರಣೆ ಮಾಡುತ್ತಾ ಬಂದಿದೆ. ಮಿಚಿಗನ್ ರಾಜ್ಯದ ಪಂಪ ಕನ್ನಡ ಕೂಟವು 53 ವರ್ಷ ಪೂರೈಸಿ, 54ನೇ ವರ್ಷಕ್ಕೆ ಪದಾರ್ಪಣೆ ಮಾಡಿದೆ.

ಈ ಕಾರ್ಯಕ್ರಮಗಳ ನಡುವೆ ವರ್ಷಕ್ಕೊಮ್ಮ ಸಂತೋಷಕೂಟ ಏರ್ಪಡಿಸಿ, ಬೆಳಿಗ್ಗೆಯಿಂದ ಸಂಜೆ ತನಕ, ಮಕ್ಕಳಿಂದ ಹಿರಿಯರ ತನಕ ವಿವಿಧ ಬಗೆಯ ಆಟಗಳು, ಗಾಯನ - ನೃತ್ಯ, ಇತ್ಯಾದಿ ರಸಮಂಜರಿ ಕಾರ್ಯಕ್ರಮಗಳು ಜರುಗುತ್ತವೆ. ಮಧ್ಯಾನದ ಸಮಯಕ್ಕೆ ವೈವಿದ್ಯಮಯ ರುಚಿಕರ ಭಾರತೀಯ ಊಟ. ಒಟ್ಟಿನಲ್ಲಿ ಇಡೀ ದಿನ ಹಬ್ಬದ ಸಂಭ್ರಮವಿರುತ್ತದೆ.

ಈ ಸಂದರ್ಭದಲ್ಲಿ ಪಂಪ ಕನ್ನಡ ಕೂಟದ ಅಧ್ಯಕ್ಷರಾದ ಪ್ರಮೋದ್ ಗೋಪಾಲ್, ಉಪಾಧ್ಯಕ್ಷ ನವೀನ್ ಹಟಪಿಕಿ, ಕಾರ್ಯದರ್ಶಿ ವೆಂಕಟೇಶ್ ಪೊಳಲಿ, ಖಜಾಂಚಿ ಅಶುತೋಷ್, ಬೋರ್ಡ್ ಸದಸ್ಯರಾದ ಪ್ರಶಾಂತ್ ಕಟ್ಟಿ, ಚನ್ನಾ ರೆಡ್ಡಿ, ರಾಘವೇಂದ್ರ ಕುಲಕರ್ಣಿ ಜೊತೆಗೆ ಪ್ರಕಾಶ್, ಸತೀಶ್, ಅನಿಲ್, ವಾಣಿ, ಶ್ರೀದೇವಿ, ಸ್ನೇಹಾ, ಪೂರ್ಣಿಮಾ, ವಾಣಿ , ಕಿಶೋರ್ ಎನ್ ಸಿ, ಅಶ್ವಿನಿ , ಶಿಲ್ಪಾ, ನೇತ್ರಾ, ಕಿರಣ್, ಅರವಿಂದ್, ರವಿ, ರಾಜೇಶ್ ಎಂ ಬಿ, ದೀಪಕ್, ಮಿಲನ್, ಶರಣಮ್ಮ ಇನ್ನೊ ಹಲವಾರು ಪ್ರಮುಖರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.