ADVERTISEMENT

ಕೆಪಿಸಿ ನಿಗಮ ಉಳಿಸುವುದು ಪ್ರತಿಯೊಬ್ಬರ ಜವಾಬ್ದಾರಿ: ಮೋಹನ್

​ಪ್ರಜಾವಾಣಿ ವಾರ್ತೆ
Published 22 ಜುಲೈ 2024, 13:57 IST
Last Updated 22 ಜುಲೈ 2024, 13:57 IST
ಕಾರ್ಗಲ್ ಕುವೆಂಪು ರಂಗ ಮಂದಿರದ ಒಳಾಂಗಣದಲ್ಲಿ 55ನೇ ಕೆಪಿಸಿ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮವನ್ನು ಅಧಿಕಾರಿ ಪೂರ್ಣಿಮಾ ಗಿಡ್ಡಪ್ಪಗೌಡ ಉದ್ಘಾಟಿಸಿದರು
ಕಾರ್ಗಲ್ ಕುವೆಂಪು ರಂಗ ಮಂದಿರದ ಒಳಾಂಗಣದಲ್ಲಿ 55ನೇ ಕೆಪಿಸಿ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮವನ್ನು ಅಧಿಕಾರಿ ಪೂರ್ಣಿಮಾ ಗಿಡ್ಡಪ್ಪಗೌಡ ಉದ್ಘಾಟಿಸಿದರು   

ಕಾರ್ಗಲ್: ‘ನಾಡಿನ ಸರ್ಕಾರಿ ಸ್ವಾಮ್ಯದ ಸಂಸ್ಥೆಯಾದ ಕರ್ನಾಟಕ ವಿದ್ಯುತ್ ನಿಗಮವನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬ ಉದ್ಯೋಗಿಗಳ ಜವಾಬ್ದಾರಿ’ ಎಂದು ಕೆಪಿಸಿ ಕಾಮಗಾರಿ ವಿಭಾಗದ ಮುಖ್ಯ ಎಂಜಿನಿಯರ್ ಮೋಹನ್ ಹೇಳಿದರು.

ಇಲ್ಲಿನ ಕುವೆಂಪು ರಂಗಮಂದಿರದಲ್ಲಿ ಶನಿವಾರ ನಡೆದ 55ನೇ ಕೆಪಿಸಿ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ನಾಡಿನ ಅನೇಕ ಕುಟುಂಬಗಳ ತ್ಯಾಗ ಬಲಿದಾನದಿಂದ ಕೆಪಿಸಿ ಸಂಸ್ಥೆ ಉಗಮಗೊಂಡಿದ್ದು, ನಾಡಿಗೆ ಬೆಳಕು ನೀಡಲು ಹಗಲು ರಾತ್ರಿ ಎನ್ನದೇ ಶ್ರಮಿಸುತ್ತಿದೆ. 1970ರ ದಶಕದ ಜುಲೈ 20ರ ಅಮಾವಾಸ್ಯೆಯಂದು ಕಗ್ಗತ್ತಲಿನಲ್ಲಿ ಸ್ಥಾಪನೆಗೊಂಡ ವಿದ್ಯುತ್ ನಿಗಮ ಇಂದು 10,000 ಮೆ.ವಾ ವಿದ್ಯುತ್ ಉತ್ಪಾದನೆ ಮಾಡುವ ಮಟ್ಟಕ್ಕೆ ಬೆಳೆದು ನಿಂತಿದೆ’ ಎಂದರು.

ADVERTISEMENT

‘ಕೆಪಿಸಿ ನಿಗಮ ಎಲ್ಲಾ ರೀತಿಯ ಸೌಲಭ್ಯಗಳನ್ನು ತನ್ನ ಉದ್ಯೋಗಿಗಳಿಗೆ ನೀಡುತ್ತಾ ಬಂದಿದೆ. ಪ್ರಾಮಾಣಿಕತೆ ಮತ್ತು ಶ್ರದ್ಧೆಯಿಂದ ಕರ್ತವ್ಯ ನಿರ್ವಹಿಸಬೇಕು’ ಎಂದು ಅಧೀಕ್ಷಕ ಎಂಜಿನಿಯರ್ ಅಬ್ದುಲ್ ಮಜೀದ್ ಸಲಹೆ ನೀಡಿದರು.

‘ದೇಶದಲ್ಲಿಯೇ ಅತ್ಯಂತ ಕಡಿಮೆ ಬೆಲೆಗೆ ದೊರಕುವ ವಿದ್ಯುತ್ ಎಂದರೆ ಅದು ಜಲವಿದ್ಯುತ್ ಮಾತ್ರ ಆಗಿದೆ. ಅತಿ ಕಡಿಮೆ ಬೆಲೆಗೆ ದೊರಕುವ ವಿದ್ಯುತ್‌ನಿಂದ ಇಂದು ಸರ್ಕಾರ ತನ್ನ ಗ್ಯಾರಂಟಿ ಯೋಜನೆಯಾದ ಗೃಹಜ್ಯೋತಿಯನ್ನು ಜಾರಿಗೆ ತರಲು ಸಹಕಾರಿಯಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕೆಪಿಸಿ ಇಲಾಖೆಗೆ ಆರ್ಥಿಕ ಸಧೃಢತೆ ನೀಡಿ ಬೆಂಬಲಿಸಬೇಕು’ ಎಂದು ಕೆಪಿಸಿ ಕಾರ್ಮಿಕ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕೆ. ವೀರೇಂದ್ರಗೌಡ ಒತ್ತಾಯಿಸಿದರು.

25 ವರ್ಷಗಳ ಕಾಲ ನಿಗಮದಲ್ಲಿ ಸೇವೆ ಸಲ್ಲಿಸಿದ ಉದ್ಯೋಗಿಗಳನ್ನು ಸನ್ಮಾನಿಸಲಾಯಿತು.

ಕೆಪಿಸಿ ಸಿಬ್ಬಂದಿ ಅಧಿಕಾರಿ ಪೂರ್ಣಿಮಾ ಗಿಡ್ಡಪ್ಪಗೌಡ, ಕೆಪಿಸಿ ನಿವೃತ್ತ ಅದೀಕ್ಷಕ ಎಂಜಿನಿಯರ್ ಚನ್ನವೀರಪ್ಪ ಮತ್ತು ನಿವೃತ್ತ ಕಾರ್ಮಿಕ ಸಂಘಟನೆಯ ನಂಜಯ್ಯ, ಶ್ವೇತಾ, ಯಲ್ಲಪ್ಪ, ಶಂಕರಪ್ಪ, ಎಸ್. ನಾಗರಾಜ್, ಕೆ. ವೀರೇಂದ್ರ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.