ADVERTISEMENT

ವಿಧಾನ ಪರಿಷತ್ತಿಗೆ ಜಾಧವ್‌, ಜಯಪ್ರಕಾಶ್‌ ಆಕಾಂಕ್ಷಿಗಳು: ಜಿ.ಎಂ. ಸಿದ್ದೇಶ್ವರ

​ಪ್ರಜಾವಾಣಿ ವಾರ್ತೆ
Published 13 ಜೂನ್ 2020, 16:10 IST
Last Updated 13 ಜೂನ್ 2020, 16:10 IST
ಸಂಸದ ಜಿ.ಎಂ. ಸಿದ್ದೇಶ್ವರ
ಸಂಸದ ಜಿ.ಎಂ. ಸಿದ್ದೇಶ್ವರ   

ದಾವಣಗೆರೆ: ‘ಈಗಾಗಲೇ ಜಿಲ್ಲೆಯಿಂದ ಯಶವಂತರಾವ್‌ ಜಾಧವ್‌ ಮತ್ತು ಅಂಬರ್‌ಕರ್‌ ಜಯಪ್ರಕಾಶ್‌ ಅವರು ವಿಧಾನ ಪರಿಷತ್‌ ಸದಸ್ಯರಾಗಲು ಆಕಾಂಕ್ಷಿಗಳಾಗಿದ್ದಾರೆ. ಈ ಕುರಿತು ಸಂಘ ಪರಿವಾರವನ್ನು, ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಮನವಿ ಮಾಡಿಕೊಂಡಿದ್ದಾರೆ. ನಾನೂ ಮನವಿ ಮಾಡಿದ್ದೇನೆ’ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ತಿಳಿಸಿದರು.

‘ಹೈಕಮಾಂಡ್‌ ಏನು ತೀರ್ಮಾನ ಮಾಡುತ್ತದೆಯೇ ಅದಕ್ಕೆ ಪಕ್ಷ ಬದ್ಧವಾಗುತ್ತದೆ. ನಲ್ವತ್ತು ಆಕಾಂಕ್ಷಿಗಳಾಗಿರುವುದು ತಪ್ಪಲ್ಲ. ಎಲ್ಲರಿಗೂ ಆಸೆ ಇರುತ್ತದೆ. ಕೋರ್‌ ಕಮಿಟಿ ನಿರ್ಧರಿಸುತ್ತದೆ. ಜಿಲ್ಲೆಯ ಇಬ್ಬರಿಗೂ ಅವಕಾಶ ಕೊಟ್ಟರೆ ಒಳ್ಳೆಯದು. ಕನಿಷ್ಠ ಒಬ್ಬರಿಗಾದರೂ ನೀಡಬೇಕು. ನೀಡಿಲ್ಲ ಅಂದರೂ ಸಮಾಧಾನದಲ್ಲೇ ಇರುತ್ತೇವೆ. ಯಾಕೆಂದರೆ ಅಧ್ಯಕ್ಷರ, ಮುಖ್ಯಮಂತ್ರಿಗಳ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಬೇಕಾಗುತ್ತದೆ’ ಎಂದರು.

ವಿಶ್ವನಾಥ್‌, ಎಂಟಿಬಿ ಸಹಿತ ಎಲ್ಲರೂ ಬಿಜೆಪಿಯೇ. ವಲಸೆ ಬಂದವರು ಎಂಬುದಿಲ್ಲ. ಎಲ್ಲರೂ ಪಕ್ಷದ ತೀರ್ಮಾನಕ್ಕೆ ಬದ್ಧವಾಗಿರಬೇಕಾಗುತ್ತದೆ ಎಂದು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.