
ಜಗಳೂರು: ಪಟ್ಟಣದ ನ್ಯಾಯಾಲಯದ ಸಮೀಪ ಶುಕ್ರವಾರ ಎರಡು ಬೈಕ್‌ಗಳ ನಡುವೆ ಡಿಕ್ಕಿಯಾಗಿ ತೀವ್ರವಾಗಿ ಗಾಯಗೊಂಡಿದ್ದವರನ್ನು ನ್ಯಾಯಾಧೀಶ ಆರ್. ಚೇತನ್ ಉಪಚರಿಸಿ ತಮ್ಮ ವಾಹನದಲ್ಲೇ ಆಸ್ಪತ್ರೆಗೆ ಕಳುಹಿಸಿ ಮಾನವೀಯತೆ ಮೆರೆದಿದ್ದಾರೆ.
ನ್ಯಾಯಾಲಯದ ಮುಂಭಾಗದಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದ್ದು, ದಾವಣಗೆರೆ ಕಡೆಯಿಂದ ಬರುತ್ತಿದ್ದ ಬೈಕ್‌ಗೆ ಜಗಳೂರು ಪಟ್ಟಣದಿಂದ ಬಂದ ಬೈಕ್ ಎದುರಾಗಿ ಮುಖಾಮುಖಿ ಡಿಕ್ಕಿ ಸಂಭವಿಸಿತು. ಬೈಕ್ ಸವಾರರು ಗಾಯಗೊಂಡು ಹೊರಳಾಡುತ್ತಿದ್ದರು. ಇದೇ ಮಾರ್ಗವಾಗಿ ಸಿವಿಲ್ ಮತ್ತು ಜೆಂಎಫ್‌ಸಿ ನ್ಯಾಯಾಧೀಶ ಆರ್. ಚೇತನ್ ಅವರು ಮುಗ್ಗಿದರಾಗಿಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಸಮಾರಂಭಕ್ಕೆ ತೆರಳುತ್ತಿದ್ದರು.
ರಕ್ತಸಿಕ್ತವಾಗಿದ್ದ ಗಾಯಾಳುಗಳನ್ನು ಗಮನಿಸಿ ವಾಹನ ನಿಲ್ಲಿಸಿದರು. ತಮ್ಮ ವಾಹನದಲ್ಲಿ ಅವರನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕಳುಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.