ಸಾಂದರ್ಭಿಕ ಚಿತ್ರ
– ಎ.ಐ ಚಿತ್ರ
ಕಡರನಾಯ್ಕನಹಳ್ಳಿ: ಸಮೀಪದ ಹೊಳೆ ಸಿರಿಗೆರೆ ಕ್ರಾಸ್ ಮತ್ತು ಯಲವಟ್ಟಿ ರಸ್ತೆಯ ಪಕ್ಕದ ಅಡಿಕೆ ತೋಟದಲ್ಲಿ ಬೀಡುಬಿಟ್ಟಿದ್ದ ಕುರಿಗಳ ಮೇಲೆ ಚಿರತೆಗಳು ದಾಳಿ ನಡೆಸಿದ್ದು, 20 ಕುರಿಗಳು ಸತ್ತಿದ್ದು, 5 ಕುರಿಗಳಿಗೆ ಗಂಭೀರ ಗಾಯಗಳಾಗಿವೆ.
ಯಲವಟ್ಟಿ ಗ್ರಾಮದ ಬೀರೇಶ ಅವರ ಜಮೀನಿನಲ್ಲಿ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲ್ಲೂಕಿನ ಸದಲಗ ಗ್ರಾಮದ ಸೋಮಪ್ಪ ಪೀರಪ್ಪ ಅವರು ತಮ್ಮ ಕುರಿಗಳೊಂದಿಗೆ ಬೀಡುಬಿಟ್ಟಿದ್ದರು.
ಹೊಳೆ ಸಿರಿಗೆರೆಯ ಪಶುವೈದ್ಯಾಧಿಕಾರಿ ಬಾಬಾಬುಡನ್ ಅವರು ಕುರಿಗಳ ಮರಣೋತ್ತರ ಪರೀಕ್ಷೆ ನಡೆಸಿದರು.
ಪರಿಹಾರ ನೀಡಲು ಕ್ರಮಕೈಗೊಳ್ಳಲಾಗುವುದು ಎಂದು ಉಪ ವಿಭಾಗಾಧಿಕಾರಿ ಸಂತೋಷ್ ಕುಮಾರ್ ಪಾಟೀಲ್ ತಿಳಿಸಿದರು.
ಹೊಲ ಗದ್ದೆಗಳಿಗೆ ಹೋಗಲು ಭಯವಾಗುತ್ತದೆ. ಚಿರತೆಗಳನ್ನು ಹಿಡಿಯಲು ಅರಣ್ಯ ಇಲಾಖೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಸ್ಥಳೀಯರಾದ ಡಿ. ರಾಜಪ್ಪ, ಶಂಭುಲಿಂಗಯ್ಯ ಒತ್ತಾಯಿಸಿದರು.
ತಹಶೀಲ್ದಾರ್ ಗುರುಬಸವರಾಜ್, ಅರಣ್ಯ ಇಲಾಖೆಯ ಹಸನ್ ಭಾಷಾ, ಉಪ ತಹಶೀಲ್ದಾರ್ ರವಿ, ರಾಘವೇಂದ್ರ, ಹೇಮಂತ್ ಕುಮಾರ್, ಅಣ್ಣಪ್ಪ, ಷರೀಫ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.