ADVERTISEMENT

ಜ.5ರಂದು ಕನಕದಾಸರ ಪುತ್ಥಳಿ ಅನಾವರಣ: ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗಿ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2024, 15:27 IST
Last Updated 26 ಡಿಸೆಂಬರ್ 2024, 15:27 IST
<div class="paragraphs"><p>ದಾವಣಗೆರೆಯಲ್ಲಿ ಕನಕದಾಸರ ಪುತ್ಥಳಿ ಅನಾವರಣ ಕಾರ್ಯಕ್ರಮ ಕುರಿತ ಕರಪತ್ರಗಳನ್ನು&nbsp;ಹೊನ್ನಾಳಿ ಪಟ್ಟಣದಲ್ಲಿ ಕುರುಬ ಸಮುದಾಯದ ಮುಖಂಡರು ಬಿಡುಗಡೆ ಮಾಡಿದರು</p></div>

ದಾವಣಗೆರೆಯಲ್ಲಿ ಕನಕದಾಸರ ಪುತ್ಥಳಿ ಅನಾವರಣ ಕಾರ್ಯಕ್ರಮ ಕುರಿತ ಕರಪತ್ರಗಳನ್ನು ಹೊನ್ನಾಳಿ ಪಟ್ಟಣದಲ್ಲಿ ಕುರುಬ ಸಮುದಾಯದ ಮುಖಂಡರು ಬಿಡುಗಡೆ ಮಾಡಿದರು

   

ಹೊನ್ನಾಳಿ: ಕನಕದಾಸರ 537ನೇ ಜಯಂತ್ಯುತ್ಸವದ ಅಂಗವಾಗಿ ದಾವಣಗೆರೆ ನಗರದಲ್ಲಿ ಜನವರಿ 5ರಂದು ಕನಕದಾಸರ ಪುತ್ಥಳಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅನಾವರಣಗೊಳಿಸುವರು ಎಂದು ಕುರುಬ ಸಮುದಾಯದ ಮುಖಂಡ ಆಲೇಕಲ್ ಎಸ್.ಟಿ. ಅರವಿಂದ್ ತಿಳಿಸಿದರು.

ಪಟ್ಟಣದಲ್ಲಿ ಗುರುವಾರ ಕನಕದಾಸರ ಪುತ್ಥಳಿ ಅನಾವರಣ ಕಾರ್ಯಕ್ರಮದ ಕರಪತ್ರಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ADVERTISEMENT

ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು ಹಾಗೂ ಜಿಲ್ಲೆಯ ಎಲ್ಲಾ ಶಾಸಕರು, ಅಹಿಂದ ಸಮುದಾಯಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಕುರುಬ ಸಮುದಾಯದ ಎಲ್ಲಾ ತಾಲ್ಲೂಕು ಘಟಕದ ಮುಖಂಡರು ಭಾಗವಹಿಸುವರು ಎಂದು ಅವರು ಹೇಳಿದರು.

ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲ್ಲೂಕಿನಿಂದ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಸಮುದಾಯದ ಹೊನ್ನಾಳಿ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎಸ್. ಫಾಲಾಕ್ಷಪ್ಪ ಹಾಗೂ ಮುಖಂಡ ಬಿ. ಸಿದ್ದಪ್ಪ ಮನವಿ ಮಾಡಿದರು.

ಕಾರ್ಯಕ್ರಮಕ್ಕೆ ಲಕ್ಷ ಜನರನ್ನು ಸೇರಿಸುವ ಗುರಿ ಇದ್ದು, ಎಲ್ಲಾ ರೀತಿಯ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ ಎಂದು ದಾವಣಗೆರೆಯ ಇಟ್ಟಿಗುಡಿ ಮಂಜುನಾಥ್ ತಿಳಿಸಿದರು.

ಅಂದು ಬೆಳಿಗ್ಗೆ 9.30ಕ್ಕೆ ದಾವಣಗೆರೆಯ ಎಸ್‌.ಎಸ್‌.ಹೈಟೆಕ್ ಆಸ್ಪತ್ರೆ ಸಮೀಪದ ಕಾಳಿದಾಸ ವೃತ್ತದಿಂದ ಬೈಕ್ ರ‍್ಯಾಲಿ ಹಮ್ಮಿಕೊಳ್ಳಲಾಗಿದೆ. ದಾವಣಗೆರೆಯ ಹೈಸ್ಕೂಲ್ ಮೈದಾನದಲ್ಲಿ ಬೆಳಿಗ್ಗೆ 11ಕ್ಕೆ ವೇದಿಕೆ ಕಾರ್ಯಕ್ರಮ ನಡೆಯಲಿದೆ ಎಂದು ವಿವರಿಸಿದರು.

ಪಾಲಿಕೆ ಸದಸ್ಯರಾದ ಜೆ.ಎನ್. ಶ್ರೀನಿವಾಸ್, ಮುಖಂಡರಾದ ಶಿವಣ್ಣ ಮಾಸ್ಟರ್, ರಾಜು ಮೌರ್ಯ, ಲಿಂಗರಾಜ್, ಪ್ರಕಾಶ್, ಬೀರೇಶ್, ಗುಡದಪ್ಪ, ವಿನಯ್‍ಕುಮಾರ್, ಹೊನ್ನಾಳಿಯ ಎಚ್.ಬಿ. ಶಿವಯೋಗಿ, ಎಚ್.ಎ. ಉಮಾಪತಿ, ಪುರಸಭೆ ಸದಸ್ಯರಾದ ಎಂ. ಸುರೇಶ್, ಬಾಬು ಹೋಬಳದಾರ್, ಗಾಳಿ ನಾಗರಾಜ್, ರಂಜಿತ್ ಸೇರಿದಂತೆ ಅನೇಕ ಮುಖಂಡರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.