ADVERTISEMENT

ದಾವಣಗೆರೆ| ಬಿಡದೇ ಸುರಿದ ಮಳೆ: ಹಲವೆಡೆ ನುಗ್ಗಿದ ನೀರು

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2020, 4:45 IST
Last Updated 21 ಅಕ್ಟೋಬರ್ 2020, 4:45 IST
ದಾವಣಗೆರೆಯ ಗುಂಡಿ ವೃತ್ತದ ಬಳಿ ಮಂಗಳವಾರ ರಾತ್ರಿ ಸುರಿಯುತ್ತಿದ್ದ ಮಳೆಯಲ್ಲಿ ವಾಹನ ಸವಾರರ ಪರದಾಟ–ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್
ದಾವಣಗೆರೆಯ ಗುಂಡಿ ವೃತ್ತದ ಬಳಿ ಮಂಗಳವಾರ ರಾತ್ರಿ ಸುರಿಯುತ್ತಿದ್ದ ಮಳೆಯಲ್ಲಿ ವಾಹನ ಸವಾರರ ಪರದಾಟ–ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್   

ದಾವಣಗೆರೆ: ಮಂಗಳವಾರ ಸಂಜೆ ಆರಂಭಗೊಂಡ ಮಳೆ ರಾತ್ರಿ ಇಡೀ ಸುರಿದಿದೆ. ಹಲವೆಡೆ ರಸ್ತೆಗಳು ಜಲಾವೃತಗೊಂಡಿವೆ.

ಸಂಜೆ 6 ಗಂಟೆಯ ಹೊತ್ತಿಗೆ ಗುಡುಗು ಸಿಡಿಲಿನೊಂದಿಗೆ ಮಳೆ ಶುರುವಾದ ಮಳೆ ಎಡೆಬಿಡದೆ ಸುರಿಯತೊಡಗಿತು. ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ನೀರಿನಿಂದ ಆವೃತಗೊಂಡಿದೆ. ನೀಲಮ್ಮನ ತೋಟ, ಬೂದಾಳ್‌ ರಸ್ತೆ, ಎಸ್‌ಎಂ ಕೃಷ್ಣನಗರ ಸಹಿತ ಹಲವೆಡೆ ನೀರು ನುಗ್ಗಿದೆ. ನಿಟುವಳ್ಳಿ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳೇ ಕಾಲುವೆಗಳಂತಾದವು.

ಮೇಲ್ಸೇತುವೆಗಳ ಅಡಿಯಲ್ಲಿ ವಾಹನಗಳು ಆಚೀಚೆ ಸಂಚರಿಸದಷ್ಟು ಮಳೆ ಬಂದಿದೆ. ಹಳೇ ದಾವಣಗೆರೆ ಮತ್ತು ಹೊಸದಾವಣಗೆರೆಯನ್ನು ಬೆಸೆಯುವ ಬಹುತೇಕ ರಸ್ತೆಗಳ ಸಂಪರ್ಕ ಕಡಿತಗೊಂಡಿದೆ. ಆಗಸ್ಟ್‌, ಸೆಪ್ಟೆಂಬರ್‌ ತಿಂಗಳಲ್ಲಿ ದಾವಣಗೆರೆಯಲ್ಲಿ ಮಳೆ ಜಾಸ್ತಿ ಇರುತ್ತದೆ. ಅಕ್ಟೋಬರ್‌ನಲ್ಲಿ ಮಳೆಯ ರಭಸ ಕಡಿಮೆಯಾಗಿರುತ್ತದೆ. ಆದರೆ ಈ ಬಾರಿ ಅಕ್ಟೋಬರ್‌ನಲ್ಲಿಯೂ ರಭಸ ಕಡಿಮೆಯಾಗಿಲ್ಲ.

ADVERTISEMENT

ಸಂಜೆಯ ನಂತರ ಮಳೆ ಬಂದಿದ್ದರಿಂದ ಹೆಚ್ಚಿನವರು ಕೆಲಸ ಮುಗಿಸಿ ಮನೆ ಸೇರಿದ್ದರು. ಹಲವು ಮನೆಗಳಿಗೆ ನೀರು ನುಗ್ಗುವ ಭೀತಿ ಉಂಟಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.