ದಾವಣಗೆರೆ: ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ತಮ್ಮ ಕುಟುಂಬದ ಸದಸ್ಯರ ಚಿಕಿತ್ಸೆಗೆ ಹಣಕಾಸಿನ ನೆರವು ಬೇಕಿದ್ದು, ದಾನಿಗಳು ಸಹಾಯ ಹಸ್ತ ಚಾಚಬೇಕು ಎಂದು ಕೆ.ಬಿ.ಬಡಾವಣೆಯ ನಿವಾಸಿ, ತಳ್ಳುಗಾಡಿಯ ಹೋಟೆಲ್ ವ್ಯಾಪಾರಿ ಚಂದ್ರಶೇಖರ್ ಮನವಿ ಮಾಡಿದರು.
‘ಪತ್ನಿ ರಾಧಾ ಅವರ ಎರಡೂ ಕಿಡ್ನಿಗಳು ವಿಫಲಗೊಂಡಿದ್ದು, ಈವರೆಗೆ ಚಿಕಿತ್ಸೆಗೆಂದು ₹2 ಲಕ್ಷ ಖರ್ಚು ಮಾಡಿದ್ದೇನೆ. ಇನ್ನೂ ₹10 ಲಕ್ಷ ಬೇಕಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ. ಅಷ್ಟೊಂದು ಮೊತ್ತ ನನ್ನ ಬಳಿ ಇಲ್ಲ. ಹೀಗಾಗಿ ದಾನಿಗಳು ನೆರವು ನೀಡಬೇಕು’ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಸಂಕಷ್ಟ ತೋಡಿಕೊಂಡರು.
‘ಮಗನಿಗೆ 2019ರಲ್ಲಿ ಕಿಡ್ನಿ ಹಾಕಿಸಿ, ಚಿಕಿತ್ಸೆ ಕೊಡಿಸುತ್ತಿದ್ದೇನೆ. ಅಂಗವಿಕಲೆಯಾಗಿರುವ ಮಗಳ ಆರೋಗ್ಯವೂ ಸರಿ ಇಲ್ಲ. ಕಡು ಬಡತನದಲ್ಲಿ ಜೀವನ ಸಾಗಿಸುತ್ತಿದ್ದೇವೆ’ ಎಂದರು. ವೈದ್ಯಕೀಯ ದಾಖಲೆಗಳನ್ನೂ ಪ್ರದರ್ಶಿಸಿದರು.
ನೆರವು ನೀಡಲು ಇಚ್ಛಿಸುವ ದಾನಿಗಳು ಕೆನರಾ ಬ್ಯಾಂಕ್‌ನ ವಿನೋಬ ನಗರ ಶಾಖೆಯ ಖಾತೆ ಸಂಖ್ಯೆ: 1513101019187 (ರಾಧಾ), ಐಎಫ್‌ಎಸ್‌ಸಿ ಕೋಡ್- ಸಿಎನ್‌ಆರ್‌ಬಿ0001513 ಅಥವಾ ಫೋನ್ ಪೇ ಸಂಖ್ಯೆ: 9535336398 ಗೆ ಹಣ ಪಾವತಿಸಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಪತ್ನಿ ರಾಧಾ, ಮಕ್ಕಳಾದ ಸಿ.ತರುಣ್, ಸಿ.ಪುಷ್ಪಾ ಇದ್ದರು.
ಎಂಪಿಆರ್ ನೆರವು: ಸಂಕಷ್ಟದ ಬಗ್ಗೆ ಮಾಹಿತಿ ಪಡೆದ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರು ಚಂದ್ರಶೇಖರ್ ಕುಟುಂಬದವರಿಗೆ ಚಿಕಿತ್ಸೆಗೆಂದು ವೈಯಕ್ತಿಕವಾಗಿ ₹25,000 ನೆರವು ನೀಡುವುದಾಗಿ ಭರವಸೆ ನೀಡಿದರು. ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದಲೂ ಹಣ ಕೊಡಿಸಲು ಪ್ರಯತ್ನಿಸುವುದಾಗಿ ಧೈರ್ಯ ತುಂಬಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.