ADVERTISEMENT

ಕುರುಬ ಸಮಾಜದ ಅಧ್ಯಯನ ಗ್ರಂಥ ಶೀಘ್ರ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 4 ಜುಲೈ 2022, 2:45 IST
Last Updated 4 ಜುಲೈ 2022, 2:45 IST
ದಾವಣಗೆರೆ ನಗರದ ಸರ್ಕೀಟ್ ಹೌಸ್‌ನಲ್ಲಿ ಭಾನುವಾರ ನಡೆದ ಕುರುಬ ಸಮಾಜದ ಮುಖಂಡರ ಸಭೆಯಲ್ಲಿ ಮಾಜಿ ಸಚಿವ ಎಚ್.ಎಂ. ರೇವಣ್ಣ ಮಾತನಾಡಿದರು
ದಾವಣಗೆರೆ ನಗರದ ಸರ್ಕೀಟ್ ಹೌಸ್‌ನಲ್ಲಿ ಭಾನುವಾರ ನಡೆದ ಕುರುಬ ಸಮಾಜದ ಮುಖಂಡರ ಸಭೆಯಲ್ಲಿ ಮಾಜಿ ಸಚಿವ ಎಚ್.ಎಂ. ರೇವಣ್ಣ ಮಾತನಾಡಿದರು   

ದಾವಣಗೆರೆ: ಕುರುಬ ಸಮಾಜದ ಸಂಸ್ಕೃತಿ ಮತ್ತು ಪರಂಪರೆಯ ಬಗ್ಗೆ ವಿಶೇಷ ಅಧ್ಯಯನ ಮಾಡಿಸಲಾಗಿದೆ. ಇದಕ್ಕೆ ಸಂಬಂಧಿಸಿದ ಗ್ರಂಥ ಬಿಡುಗಡೆ ಮಾಡುವ ಸಮಾರಂಭವನ್ನು ದಾವಣಗೆರೆ ನಗರದಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ಕುರುಬ ಸಮಾಜದ ಮುಖಂಡ, ಮಾಜಿ ಸಚಿವ ಎಚ್.ಎಂ. ರೇವಣ್ಣಹೇಳಿದರು.

ನಗರದ ಸರ್ಕೀಟ್ ಹೌಸ್‌ನಲ್ಲಿ ನಡೆದ ಕುರುಬ ಸಮಾಜದ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.

ಈ ಸಮಾರಂಭ ಅರ್ಥಗರ್ಭಿತವಾಗಿ ಆಯೋಜಿಸುವ ಉದ್ದೇಶವಿದೆ. ಅದಕ್ಕಾಗಿ ಸಮಾಜದ ಹಿರಿಯ ಮುಖಂಡ ಕೊಳೇನಹಳ್ಳಿ ಬಿ.ಎಂ. ಸತೀಶ್ ಅಧ್ಯಕ್ಷತೆಯಲ್ಲಿ ಜಿಲ್ಲಾ ಕುರುಬ ಸಮಾಜದ ಚಿಂತನಾ ಮಂಥನಾ ಸಮಿತಿ ರಚಿಸಲಾಗಿದೆ ಎಂದು ತಿಳಿಸಿದರು.

ADVERTISEMENT

ದಾವಣಗೆರೆ ನಗರದಲ್ಲಿ ಕುರುಬ ಸಮಾಜದ ಹಿನ್ನೆಲೆ ಪರಂಪರೆ ಕುರಿತು ಈಗಾಗಲೇ ಪೂರ್ವಭಾವಿ ಸಭೆ ನಡೆಸಲಾಗಿದೆ. ಉತ್ತಮ ಸ್ಪಂದನೆ ಸಿಕ್ಕಿದೆ. ಜಿಲ್ಲೆಯ ಸಮಾಜದ ಎಲ್ಲ ಸಂಘಟನೆಗಳ ಮುಖಂಡರನ್ನು ಸಂಪರ್ಕಿಸಿ, ವಿಶ್ವಾಸ ಪಡೆದು ಸಮಾರಂಭ ನಡೆಸಲಾಗುವುದು ಎಂದುಸಮಿತಿ ಅಧ್ಯಕ್ಷ ಬಿ.ಎಂ. ಸತೀಶ್ ಹೇಳಿದರು.

ಕುರುಬ ಸಮಾಜದ ಮುಖಂಡರಾದ ನಾ.ಲೋಕೇಶ್ ಒಡೆಯರ್, ಪ್ರೊ.ಎಚ್. ಯಲ್ಲಪ್ಪ, ಪಿ. ರಾಜಕುಮಾರ, ಎಸ್.ಎಸ್. ಗಿರೀಶ್, ಎಚ್.ಜಿ. ಸಂಗಪ್ಪ, ಬಿಳಿಚೋಡು ಬೈರೇಶ್, ಗಿರೀಶ್ ಒಡೆಯರ್, ಎಂ.ಎಚ್. ಶ್ರೀನಿವಾಸ್ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.