ADVERTISEMENT

ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿ ತೋರಿಸಲಿ: ಮಾಜಿ ಸಚಿವ ರವೀಂದ್ರನಾಥ್ ಸವಾಲು

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2024, 7:25 IST
Last Updated 24 ಮಾರ್ಚ್ 2024, 7:25 IST
ಎಸ್. ಎ ರವೀಂದ್ರನಾಥ್
ಎಸ್. ಎ ರವೀಂದ್ರನಾಥ್    

ದಾವಣಗೆರೆ: ‘ನಮಗಿಂತ ಕಾಂಗ್ರೆಸ್‌ ಪಕ್ಷದಲ್ಲೇ ಹೆಚ್ಚು ಒಡಕು ಉಂಟಾಗಿದ್ದು, ಕೇವಲ ಮಾತನಾಡುವುದಲ್ಲ. ತಾಕತ್ತಿದ್ದರೆ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿ ತೋರಿಸಲಿ’ ಎಂದು ಮಾಜಿ ಸಚಿವ ಎಸ್.ಎ.ರವೀಂದ್ರನಾಥ್ ಸವಾಲು ಹಾಕಿದರು.

ಚನ್ನಗಿರಿ ಶಾಸಕ ಬಸವರಾಜ್ ವಿ.ಶಿವಗಂಗಾ ಹೇಳಿಕೆಗೆ ಹೇಳಿಕೆ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿ, ‘ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 6 ಬಾರಿ ಗೆದ್ದಿದ್ದು, ಒಂದು ಬಾರಿ ಸೋತಿದೆ. ಅವರು ಗೆದ್ದು ತೋರಿಸಬೇಕೇ ಹೊರತು ನಾವಲ್ಲ. ಅವರು ಬರೀ ಬುರುಡೆ ಬಿಡುವುದಲ್ಲ’ ಎಂದು ತಿರುಗೇಟು ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT