ಬೆಂಕಿ ತಗುಲಿದ ಪರಿಣಾಮ ಲಾರಿ ಸಂಪೂರ್ಣ ಭಸ್ಮವಾಗಿದೆ
ದಾವಣಗೆರೆ: ಒಕ್ಕಣೆಗೆ ರೈತರು ಹರಡಿದ್ದ ಹುರಳಿ ಸೊಪ್ಪಿನ ಮೇಲೆ ಸಂಚರಿಸಿದ ಲಾರಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಹೊತ್ತಿ ಉರಿದ ಘಟನೆ ಜಗಳೂರು ತಾಲ್ಲೂಕಿನ ದೊಣೆಹಳ್ಳಿ ಸಮೀಪ ಸೋಮವಾರ ನಡೆದಿದೆ.
ಸಿಮೆಂಟ್ ತುಂಬಿದ ಲಾರಿ ಆಂಧ್ರಪ್ರದೇಶದಿಂದ ದಾವಣಗೆರೆ ಕಡೆಗೆ ಬರುವಾಗ ಜಗಳೂರು ತಾಲ್ಲೂಕಿನ ದೋಣೆಹಳ್ಳಿ-ಮುಷ್ಟೂರು ನಡುವೆ ಈ ಘಟನೆ ನಡೆದಿದೆ. ಘಟನೆಯಲ್ಲಿ ಲಾರಿ ಸಂಪೂರ್ಣ ಭಸ್ಮವಾಗಿದೆ.
ರೈತರು ಹುರಳಿ ಸೊಪ್ಪನ್ನು ಒಕ್ಕಣೆಗೆ ರಸ್ತೆಯ ಮೇಲೆ ಹರಡಿದ್ದರು. ಹುರುಳಿ ಮೇಲೆ ಹರಿದ ಲಾರಿಗೆ ಬೆಂಕಿ ಹೊತ್ತಿಕೊಂಡಿದೆ. ಇದನ್ನು ಗಮನಿಸಿದ ಚಾಲಕ ಹಾಗೂ ಕ್ಲೀನರ್ ಲಾರಿ ನಿಲುಗಡೆ ಮಾಡಿ ಕೆಳಗೆ ಇಳಿದಿದ್ದಾರೆ. ಕ್ಷಣಾರ್ಧದಲ್ಲಿ ಬೆಂಕಿ ಲಾರಿಗೆ ವ್ಯಾಪಿಸಿದೆ. ಅಗ್ನಿಶಾಮಕ ತುರ್ತುಸೇವಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ಆರಿಸಲು ಪ್ರಯತ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.