
ಮಾಯಕೊಂಡ: ಇಲ್ಲಿನ ಹಿರೇ ಮದಕರಿ ನಾಯಕರ ಸಮಾಧಿಗೆ ಕಾಂಪೌಂಡ್ ನಿರ್ಮಾಣ ಮಾಡಲು ಅನುಧಾನ ಬಿಡುಗಡೆ ಆಗಿದ್ದು, ಪುರಾತತ್ವ ಇಲಾಖೆ ಎಂಜಿನಿಯರ್ ಅಂಬರೀಶ್ ಸೋಮವಾರ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದರು.
ಪುರಾತತ್ವ ಇಲಾಖೆಯಿಂದ ಸಮಾಧಿ ಸ್ಥಳದ ಕಾಂಪೌಂಡ್ ನಿರ್ಮಾಣಕ್ಕೆ 25 ಲಕ್ಷ ಅನುಧಾನ ಬಿಡುಗಡೆಯಾಗಿದ್ದು, ಟೆಂಡರ್ ಮುಗಿದಿದೆ. ಕಾಮಗಾರಿ ಶೀಘ್ರ ಪ್ರಾರಂಭಿಸಲಾಗುವುದು. ಸಮಾಧಿ ಸುತ್ತಲೂ ನಾಲ್ಕು ಅಡಿ ಆಳದ ನೆಲದಿಂದ ಎರಡು ಅಡಿ ಎತ್ತರ ಹಾಗೂ ಮೂರು ಅಡಿ ಅಗಲದ ಫೌಂಡೇಷನ್ ನಿರ್ಮಾಣ ಮಾಡಲಾಗುವುದು. ಅದರ ಮೇಲೆ ಕಬ್ಬಿಣದ ಗ್ರಿಲ್ ಮತ್ತು ಗೇಟ್ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಮುಂದಿನ ದಿನಗಳಲ್ಲಿ ಸಮಾಧಿ ಸ್ಥಳ ಅಭಿವೃದ್ಧಿಗೆ ಸತೀಶ್ ಜಾರಕಿಹೊಳಿ ಅವರಿಂದ ಹೆಚ್ಚಿನ ಅನುದಾನ ತರಲಾಗುವುದು. ಜೊತೆಗೆ ಸ್ಥಳಕ್ಕೆ ಕೋಟೆಯ ರೀತಿ ಅಭಿವೃದ್ಧಿ ಮಾಡುವ ಉದ್ದೇಶ ಇದೆ. ಆದ್ದರಿಂದ ಈಗಿನ ಕಾಮಗಾರಿಯನ್ನ ಗುಣಮಟ್ಟದಿಂದ ಮಾಡಿ ಎಂದು ಎಸ್‌ಟಿ ಮೋರ್ಚಾ ರಾಜ್ಯ ಘಟಕದ ಉಪಾಧ್ಯಕ್ಷ ಐಗೂರು ಹನುಮಂತಪ್ಪ ತಿಳಿಸಿದರು.
ಎಂಜಿನಿಯರ್ ರವಿಕುಮಾರ್, ಗುತ್ತಿಗೆದಾರ ನರಸಿಂಹಮೂರ್ತಿ, ಮುನೇಗೌಡ, ಮೊಹಮ್ಮದ್ ರಫೀಕ್, ಮುಖಂಡರಾದ ಎಂ.ಜಿ. ಗುರುನಾಥ್, ವಿಜಯಸಾರಥಿ, ಮಹಾರುದ್ರಪ್ಪ, ಎಸ್. ಆರ್. ಜಗದೀಶ್, ರಂಗಸ್ವಾಮಿ, ಶಿವಣ್ಣ, ಹುಚ್ಚವ್ವನಹಳ್ಳಿ ಕಂಭರಾಜ್, ಜಯಣ್ಣ, ದಿಂಡದಹಳ್ಳಿ ಮಂಜುನಾಥ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.