ಮಹಾ ಶಿವರಾತ್ರಿ
ಮಲೇಬೆನ್ನೂರು: ಪಟ್ಟಣದ ಈಶ್ವರೀಯ ವಿ.ವಿ. ಆಶ್ರಯದಲ್ಲಿ ಫೆ. 15ರಂದು ಬೆಳಿಗ್ಗೆ 9ಕ್ಕೆ ಮಹಾಶಿವರಾತ್ರಿ ಪ್ರಯುಕ್ತ 90 ಶಿವಲಿಂಗ ಹಾಗೂ ಕಳಸಹೊತ್ತ ಮಹಿಳೆಯರಿಂದ ಪಟ್ಟಣದ ಮುಖ್ಯ ಬೀದಿಗಳಲ್ಲಿ ಶೋಭಾಯಾತ್ರೆ ಆಯೋಜಿಸಲಾಗಿದೆ ಎಂದು ಬ್ರಹ್ಮಕುಮಾರಿ ಶಾಂತಕ್ಕ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ಉದ್ಯಮಿ ಚಿದಾನಂದಪ್ಪ ಅವರು ವಿ.ವಿ. ಸಭಾಂಗಣದಲ್ಲಿ ಧ್ವಜಾರೋಹಣ ನೆರವೇರಿಸಲಿದ್ದಾರೆ. ವೈದ್ಯ ಹನುಮಂತಪ್ಪ, ಪಿಎಸ್ಐ ಹಾರೂನ್ ಅಖ್ತರ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸದಸ್ಯರು ಉಪಸ್ಥಿತರಿರುತ್ತಾರೆ ಎಂದು ತಿಳಿಸಿದರು.
ಶಿವಲಿಂಗ ಸಾಲಿಗ್ರಾಮಕ್ಕೆ ಕ್ಷೀರಾಭಿಷೇಕ ಮಾಡುವ ಮೂಲಕ ಉತ್ಸವಕ್ಕೆ ಚಾಲನ ನೀಡಲಾಗುವುದು. ಬ್ರಹ್ಮಕುಮಾರಿ ಲೀಲಕ್ಕ, ಗಂಗಾಂಬಿಕಾ ಉಪನ್ಯಾಸ ನೀಡಲಿದ್ದಾರೆ ಎಂದರು.
ಹೊಳಸಿರಿಗೆರೆ ಕೇಂದ್ರದಲ್ಲಿ ಫ. 16ರಂದು ಶಿವರಾತ್ರಿ ಕಾರ್ಯಕ್ರಮ ಆಯೋಜಿಸಲಾಗಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯೋಜನಾಧಿಕಾರಿ ವಸಂತ್ ದೇವಾಡಿಗ, ಎನ್. ಜಿ. ನಾಗನಗೌಡ ನೇತೃತ್ವದಲ್ಲಿ ಸಭಾ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ನಾಗರಿಕರು ಆಗಮಿಸುವಂತೆ ಮನವಿ ಮಾಡಿದರು.
ಬಿ.ಕೆ. ರುದ್ರಯ್ಯ, ಪಂಚಣ್ಣ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.