
ಪ್ರಜಾವಾಣಿ ವಾರ್ತೆ
ಮಲೇಬೆನ್ನೂರು: ಸಮೀಪದ ಕುಣಿಬೆಳೆಕೆರೆ ಗ್ರಾಮದಲ್ಲಿ ಮಂಗಳವಾರ ಸಂಭವಿಸಿದ ಅಗ್ನಿ ಆಕಸ್ಮಿಕದಲ್ಲಿ 12 ಭತ್ತದ ಹುಲ್ಲಿನ ಬಣವೆ ಸುಟ್ಟು ಭಸ್ಮವಾಗಿವೆ.
ಒಣಗಿದ ಭತ್ತದ ಹುಲ್ಲಿನ ಬಣವೆ ಉಮೇಶ ದಾನಪ್ಳ ಈಶ್ವರಪ್ಪ ಅವರಿಗೆ ಸೇರಿವೆ. ₹50,000 ಹಾನಿಯಾಗಿದೆ ಎಂದು ನಷ್ಟ ಅಂದಾಜಿಸಲಾಗಿದೆ.
ಅಗ್ನಿಶಾಮಕ ದಳದ ತುರ್ತು ಸೇವಾ ಸಿಬ್ಬಂದಿ ಮತ್ತು ಗ್ರಾಮಸ್ಥರು ಬೆಂಕಿ ಹರಡುವುದನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾದರು.
ಅಗ್ನಿಶಾಮಕ ದಳದ ಮುಖ್ಯ ಶಾಖಾಧಿಕಾರಿ ಶಂಕರ್ ಮೂರ್ತಿ, ಸಹಾಯಕ ಸಿಬ್ಬಂದಿ ಬಸವರಾಜ್, ಫತೇ ನಾಯಕ್, ಮೋಹನ್ ಚಿಟ್ಟು, ಭೂಷಣ್ ಕೆ. ಹೊಸೂರ್ ಕಾರ್ಯಾಚರಣೆ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.