ಹರಿಹರ: ಇಲ್ಲಿನಗಾಂಧಿನಗರದ ಸೀಲ್‌ಡೌನ್ ಪ್ರದೇಶದಲ್ಲಿ ಗುರುವಾರ ಮದುವೆ ಸಮಾರಂಭ ನಡೆದಿದ್ದು, ಕಂಟೈನ್‌ಮೆಂಟ್ ವಲಯದಲ್ಲಿ ಮದುವೆ ನಡೆದಿದ್ದರೂ ಅಧಿಕಾರಿಗಳ ಗಮನಕ್ಕೆ ಬಾರದಿರುವುದು ಸಾರ್ವಜನಿಕರ ಚರ್ಚೆಗೆ ಗ್ರಾಸವಾಗಿದೆ.
ಅಧಿಕಾರಿಗಳು ಮದುವೆ ಮುಗಿದ ಮೇಲೆ ಬಂದು ಸ್ಥಳ ಪರಿಶೀಲನೆ ನಡೆಸಿದ್ದು, ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.
ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಪ್ರದೇಶ ಸೀಲ್‌ಡೌನ್ ಆಗಿತ್ತು. ಸೀಲ್‌ಡೌನ್ ಇದ್ದರೂ ಗಾಂಧಿನಗರದ ನಿವಾಸಿ ಇಸ್ಮಾಯಿಲ್ ಸಾಬ್ ಎಂಬುವವರು ತಮ್ಮ ಮೊಮ್ಮಗಳ ಮದುವೆ ಮಾಡಿದ್ದಾರೆ. ವಿವಾಹದಲ್ಲಿ 100ಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು.
‘ದೇವರಬೆಳಕೆರೆ, ಸಾಲಕಟ್ಟೆ, ಕುಣಿಬೆಳಕೆರೆ ಗ್ರಾಮ ಪಂಚಾಯಿತಿ ಆಡಳಿತ ಅಧಿಕಾರದ ಜವಾಬ್ದಾರಿ ನನಗೆ ವಹಿಸಲಾಗಿದೆ.ನಮಗೆ ಯಾವುದೇ ಸಿಬ್ಬಂದಿಯನ್ನು ನೀಡಿಲ್ಲ. ಅಲ್ಲಿನ ನಿವಾಸಿಯೊಬ್ಬರುಮಾಹಿತಿ ನೀಡಿದ್ದರು.ನಾನು ಹೋದಾಗ ಮದುವೆ ಮುಗಿದಿತ್ತು. ಸಮರ್ಪಕ ಸಿಬ್ಬಂದಿ ಇರದ ಕಾರಣ ಎರಡೆರಡುಕೆಲಸ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಈಬಗ್ಗೆ ತಹಶೀಲ್ದಾರ್‌ಗೆ ಮಾಹಿತಿ ನೀಡಿದ್ದೇನೆ’ ಎಂದು ಗಾಂಧಿನಗರ ಇನ್ಸಿಡೆಂಟ್ ಕಮಾಂಡರ್‌ರಾಮಕೃಷ್ಣಪ್ಪ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.