ADVERTISEMENT

ಮಾಯಕೊಂಡ: ಉತ್ತಮ ಮಳೆ, ರೈತರಲ್ಲಿ ಮಂದಹಾಸ

​ಪ್ರಜಾವಾಣಿ ವಾರ್ತೆ
Published 16 ಮೇ 2024, 13:46 IST
Last Updated 16 ಮೇ 2024, 13:46 IST
ಮಾಯಕೊಂಡ ಸಮೀಪದ ಜಮೀನಿನಲ್ಲಿ ಗುರುವಾರ ಸುರಿದ ಗಾಳಿ ಸಹಿತ ಮಳೆ
ಮಾಯಕೊಂಡ ಸಮೀಪದ ಜಮೀನಿನಲ್ಲಿ ಗುರುವಾರ ಸುರಿದ ಗಾಳಿ ಸಹಿತ ಮಳೆ   

ಮಾಯಕೊಂಡ: ಅಂತರ್ಜಲ ಕೊರತೆ, ಬಿಸಿಲಿನ‌ ತಾಪದಿಂದ ಬಳಲಿದ್ದ ರೈತರ ಮೊಗದಲ್ಲಿ ಗುರುವಾರ ಸಂಜೆ ಬಿದ್ದ ಉತ್ತಮ ಮಳೆಯಿಂದಾಗಿ ಸಂತಸ ಮನೆಮಾಡಿದೆ.

ಗುರುವಾರ ಸಂಜೆ ವೇಳೆಗೆ ಮಾಯಕೊಂಡ, ಹುಚ್ಚವ್ವನಹಳ್ಳಿ, ಬಾವಿಹಾಳು, ಕೊಡಗನೂರು ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಮಳೆಯಾಗಿದ್ದು ಭೂಮಿ ತಂಪಾಗಿದೆ. ತೋಟಗಾರಿಕಾ ಬೆಳೆಗಳು ಈಗಾಗಲೇ ಒಣಗುವ ಹಂತಕ್ಕೆ ಬಂದು ನಿಂತಿದ್ದವು. ಹಲವು ತೋಟಗಳು ಒಣಗಿ ಹೋಗಿವೆ. ಕಳೆದ ನಾಲ್ಕಾರು ತಿಂಗಳಿಂದ ತೋಟಗಳಿಗೆ ನಿತ್ಯವೂ ಟ್ಯಾಂಕರ್ ಮೂಲಕ ನೀರನ್ನ ಸರಬರಾಜು ಮಾಡಿದ್ದ ರೈತರಿಗೆ ಈ ಮಳೆ ಹರ್ಷ ತಂದಿದೆ. ಟ್ಯಾಂಕರ್ ನೀರಿನ ಮೇಲಿನ ಅವಲಂಬನೆ ಕಡಿಮೆಯಾಗಿದೆ ಎಂದು ಬಾವಿಹಾಳು ಹಾಗು ಸುತ್ತಮುತ್ತಲ ಗ್ರಾಮಗಳ ರೈತರು ಹೇಳಿದ್ದಾರೆ. 

‘ಮಳೆಯಿಂದ ನೆಮ್ಮದಿ ಸಿಕ್ಕಿದೆ. ಈ ಮಳೆ ಬಾರದಿದ್ದರೆ ಅರ್ಧಂಬರ್ಧ ಒಣಗಿದ್ದ ನಮ್ಮ ತೋಟಗಳು ಸಂಪೂರ್ಣ ಒಣಗಿ ಹೋಗುತ್ತಿದ್ದವು. ಈ ವರ್ಷವಾದರೂ ಉತ್ತಮ ಮಳೆಯಾದರೆ ನಮ್ಮ ರೈತರು ಉತ್ತಮ ಬೆಳೆ ಬೆಳೆಯುತ್ತಾರೆ. ಇಲ್ಲವಾದಲ್ಲಿ ಕಷ್ಟವಾಗುತ್ತದೆ’ ಎಂದು ಬಾವಿಹಾಳು ಗ್ರಾಮಸ್ಥರಾದ ಹರೀಶ್, ಡೈರಿ ರವಿ, ಶರಣ, ಮಾಯಪ್ಪ ಹೇಳಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.