ADVERTISEMENT

ಅಥಣಿ ಶಿವಯೋಗಿಗಳ ಸ್ಮರಣೆ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2021, 4:55 IST
Last Updated 29 ಏಪ್ರಿಲ್ 2021, 4:55 IST
ದಾವಣಗೆರೆ ವಿರಕ್ತಮಠದಲ್ಲಿ ಬುಧವಾರ ಸರಳವಾಗಿ ಆಚರಿಸಲಾದ ಅಥಣಿ ಶಿವಯೋಗಿಗಳ 100ನೇ ವರ್ಷದ ಸ್ಮರಣೋತ್ಸವದಲ್ಲಿ ವಿರಕ್ತಮಠದ ಬಸವಪ್ರಭು ಸ್ವಾಮೀಜಿ ಮಾತನಾಡಿದರು.
ದಾವಣಗೆರೆ ವಿರಕ್ತಮಠದಲ್ಲಿ ಬುಧವಾರ ಸರಳವಾಗಿ ಆಚರಿಸಲಾದ ಅಥಣಿ ಶಿವಯೋಗಿಗಳ 100ನೇ ವರ್ಷದ ಸ್ಮರಣೋತ್ಸವದಲ್ಲಿ ವಿರಕ್ತಮಠದ ಬಸವಪ್ರಭು ಸ್ವಾಮೀಜಿ ಮಾತನಾಡಿದರು.   

ದಾವಣಗೆರೆ: ದೇಶದ ಯೋಗ ಪರಂಪರೆಯಲ್ಲಿ ಅಗ್ರಗಣ್ಯರಾಗಿರುವ ಅಥಣಿ ಶಿವಯೋಗಿ ಸ್ವಾಮೀಜಿ ದೇಶ ಕಂಡ ಮಹಾನ್ ಶಿವಯೋಗಿ ಎಂದು ವಿರಕ್ತಮಠದ ಬಸವಪ್ರಭು ಸ್ವಾಮೀಜಿ ಹೇಳಿದರು.

ಇಲ್ಲಿನ ವಿರಕ್ತಮಠದಲ್ಲಿ ಬುಧವಾರ ಸರಳವಾಗಿ ಆಚರಿಸಲಾದ ಅಥಣಿ ಶಿವಯೋಗಿಗಳ 100ನೇ ವರ್ಷದ ಸ್ಮರಣೋತ್ಸವದಲ್ಲಿ ಅವರು ಸಾನ್ನಿಧ್ಯ ವಹಿಸಿ ಮಾತನಾಡಿದರು.

ನಡೆನುಡಿಗಳು ಒಂದಾದ ಬದುಕು ಶಿವಯೋಗಿಗಳದ್ದು. ಅವರು ಬದುಕಿನ ರೀತಿಯಿಂದಲೇ ಬೋಧಿಸಿದರು. ಬಸವತತ್ವಗಳನ್ನು ಪಾಲಿಸಿಕೊಂಡು ಬಂದು ಶ್ರೇಷ್ಠರು. ಸರ್ವ ಜನರನ್ನು ಉದ್ಧರಿಸಿದ ಒಬ್ಬ ಸಮಾಜಯೋಗಿ ಎಂದರು.

ADVERTISEMENT

ಶಿವಯೋಗಾಶ್ರಮ ಟ್ರಸ್ಟ್ ಕಾರ್ಯದರ್ಶಿ ಕಣಕುಪ್ಪಿ ಮುರುಗೇಶಪ್ಪ, ಎಸ್‍ಜೆಎಂ ಶಾಲೆಯ ಮುಖ್ಯ ಶಿಕ್ಷಕ ರೋಷನ್, ಫಾರೂಕ್, ಜಗದೀಶ್, ಅಸಗೋಡ ಶಂಭಣ್ಣ, ಶಾಂತಕುಮಾರಿ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.