ADVERTISEMENT

ವೀರಶೈವ ಲಿಂಗಾಯತ ಧರ್ಮ ಒಂದೇ ಧರ್ಮವಾಗಿ ಉಳಿಯಬೇಕು: ಸಚಿವ ಮುರುಗೇಶ್ ನಿರಾಣಿ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2021, 10:07 IST
Last Updated 2 ಸೆಪ್ಟೆಂಬರ್ 2021, 10:07 IST
ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ
ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ   

ದಾವಣಗೆರೆ: ವೀರಶೈವ ಲಿಂಗಾಯತ ಧರ್ಮ ಒಂದೇ ಧರ್ಮವಾಗಿ ಉಳಿಯಬೇಕು ವಿನಾ ವೀರಶೈವರು ಬೇರೆ ಲಿಂಗಾಯತರು ಬೇರೆ ಆಗಬಾರದು ಎಂದು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ತಿಳಿಸಿದರು.

ಸಮಸ್ತ ಲಿಂಗಾಯತ ಬೇಡಿಕೆ ಇದ್ದರೆ ತಮ್ಮದೆಯಾದ ಮುಖ್ಯಮಂತ್ರಿಗಳಿದ್ದಾರೆ ಹಾಗೂ ಸಾಕಷ್ಟು ಸಚಿವರಿದ್ದಾರೆ, ಸಭೆ ಕರೆದು ಕೂತು ಚರ್ಚೆ ನಡೆಸಿ ಸಾಧಕಬಾಧಕಗಳನ್ನು ಚರ್ಚಿಸಬೇಕು. ವಿಚಾರ‌ ಮಾಡಬೇಕು. ನಿಯಮದ ಒಳಗೆ ಸಮಸ್ಯೆ ಬಗೆಹರಿಸಕೊಳ್ಳಬೇಕು. ಪ್ರತ್ಯೇಕ ಲಿಂಗಾಯತ ಧರ್ಮದ ಬಗ್ಗೆ ಸಮಿತಿ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಈಗಾಗಾಲೇ ಅಧ್ಯಯನ ನಡೆಸಿದ್ದಾರೆ ಎಂದು ದಾವಣಗೆರೆಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.

‘ನಾನು ಪಂಚಮಸಾಲಿ ಸಮಾಜದ ಬಗ್ಗೆ ಮಾತನಾಡುವುದಿಲ್ಲ. ಸಣ್ಣ ಸಣ್ಣ ಸಮಾಜದವರನ್ನು ಒಗ್ಗೂಡಿಸಿ ಅವರ ಧ್ವನಿಯಾಗಬೇಕು. ಪಂಚಮಸಾಲಿ ಸಮಾಜಕ್ಕೆ ಮತ್ತೊಂದು ಪ್ರತ್ಯೇಕ ಪೀಠ ಸ್ಥಾಪನೆ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ಸಮಾಜದವರ ಜತೆಗೆ ಚರ್ಚಿಸಿ ತಿಳಿದುಕೊಳ್ಳುತ್ತೇನೆ’ ಎಂದು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.