ADVERTISEMENT

ಶಾಸಕ ರವೀಂದ್ರನಾಥ್‌ ಅವರ ಒಂದು ವರದಿ ಪಾಸಿಟಿವ್‌, ಮತ್ತೊಂದು ನೆಗೆಟಿವ್‌

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2020, 16:34 IST
Last Updated 30 ಆಗಸ್ಟ್ 2020, 16:34 IST
ಎಸ್‌.ಎ.ರವೀಂದ್ರನಾಥ್‌
ಎಸ್‌.ಎ.ರವೀಂದ್ರನಾಥ್‌   

ದಾವಣಗೆರೆ: ಇಲ್ಲಿನ ಉತ್ತರ ಕ್ಷೇತ್ರದ ಶಾಸಕ ಎಸ್‌.ಎ. ರವೀಂದ್ರನಾಥ್ ಅವರಿಗೆ ರ‍್ಯಾಪಿಡ್‌ ಆಂಟಿಜನ್‌ ಟೆಸ್ಟ್‌ ಮಾಡಿಸಿದಾಗ ಪಾಸಿಟಿವ್‌ ಬಂದಿದ್ದು, ಮರುದಿನವೇ ಆರ್‌ಟಿ–ಪಿಸಿಆರ್‌ ಟೆಸ್ಟ್‌ ಮಾಡಿಸಿದಾಗ ನೆಗೆಟಿವ್‌ ಬಂದಿದೆ.

74 ವರ್ಷದ ಶಾಸಕರು ಎರಡು ದಿನಗಳ ಹಿಂದೆ ರ‍್ಯಾಪಿಡ್‌ ಟೆಸ್ಟ್‌ ಮಾಡಿಸಿದ್ದರು. ಬಳಿಕ ಶನಿವಾರ ಆರ್‌ಟಿ–‍ಪಿಸಿಆರ್‌ ಟೆಸ್ಟ್‌ ಮಾಡಿಸಿದ್ದರು. ಮೊದಲನೇಯದ್ದು ಪಾಸಿಟಿವ್‌ ಬಂದಿದ್ದು, ಭಾನುವಾರದ ಕೊರೊನಾ ಬುಲೆಟಿನ್‌ನಲ್ಲಿ ನಮೂದಾಗಿದೆ. ರಾಜ್ಯ ಬುಲೆಟಿನ್‌ ನಂಬರ್‌ 335558, ಹಾಗೂ ಜಿಲ್ಲಾ ಬುಲೆಟಿನ್‌ ನಂಬರ್‌ 9035ರಲ್ಲಿ ಶಿರಮಗೊಂಡನಹಳ್ಳಿ ನಿವಾಸಿ ಎಂಎಲ್‌ಎ ಎಂದು ತೋರಿಸಲಾಗಿದೆ.

ಆದರೆ ಬುಲೆಟಿನ್‌ನಲ್ಲಿ ದಾಖಲಾಗುವ ಮೊದಲೇ ಆರ್‌ಟಿ–ಪಿಸಿಆರ್‌ ವರದಿ ಬಂದಿದ್ದು ಅದರಲ್ಲಿ ನೆಗೆಟಿವ್‌ ಎಂದಿದೆ. ಸ್ವತಃ ಜಿಲ್ಲಾ ಆಸ್ಪತ್ರೆಯ ವೈದ್ಯರೇ ಶಾಸಕರ ಮನೆಗೆ ಭೇಟಿ ನೀಡಿ ಆರ್‌ಟಿ–ಪಿಸಿಆರ್‌ ವರದಿಯೇ ಸರಿಯಾದುದು ಎಂಬುದನ್ನು ತಿಳಿಸಿದ್ದಾರೆ.

ADVERTISEMENT

‘ನಾನು ಆರಾಮ ಇದ್ದೇನೆ. ರ‍್ಯಾಪಿಡಲ್ಲಿ ಪಾಸಿಟಿವ್‌, ಆಮೇಲಿನ ಟೆಸ್ಟಲ್ಲಿ ನೆಗೆಟಿವ್‌ ಬಂದಿದೆ. ಅದೇನು ದೊಡ್ಡ ವಿವಾದ ಮಾಡುವ ಸಂಗತಿ ಅಲ್ಲ’ ಎಂದು ಶಾಸಕ ರವೀಂದ್ರನಾಥ್‌ ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.