ADVERTISEMENT

ಪುರಸಭೆ ಚುನಾವಣೆ: ಗೊಂದಲ ಸೃಷ್ಟಿಸಿದ ‘ಬಿ’ ಫಾರ್ಮ್‌

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2021, 5:03 IST
Last Updated 17 ಡಿಸೆಂಬರ್ 2021, 5:03 IST
   

ಮಲೇಬೆನ್ನೂರು:ಪಟ್ಟಣದ ಉನ್ನತೀಕರಿಸಿದ ಪುರಸಭೆಯ ಚುನಾವಣೆಗೆ ಜೆಡಿಎಸ್ ಪಕ್ಷದಿಂದ ಇಬ್ಬರು ಅಭ್ಯರ್ಥಿಗಳು ‘ಬಿ’ ಫಾರ್ಮ್‌ ಸಲ್ಲಿಸಿದ್ದು, ಗೊಂದಲ ಸೃಷ್ಟಿಯಾಗಿದೆ.

ಒಂದನೇ ವಿಭಾಗದಲ್ಲಿ ಇಬ್ಬರು ಅಭ್ಯರ್ಥಿಗಳು ‘ಬಿ’ ಫಾರ್ಮ್‌ ಸಲ್ಲಿಸಿದ್ದಾರೆ. ನಾಮಪತ್ರ ಪರಿಶೀಲನೆ ಕಾರ್ಯ ಗುರುವಾರ ಮುಕ್ತಾಯವಾಗಿದ್ದು, ನಾಮಪತ್ರ ಪರಿಶೀಲನೆ ವೇಳೆ ಒಬ್ಬ ಅಭ್ಯರ್ಥಿ ನಾಮಪತ್ರದಲ್ಲಿ ಅನುಮೋದಿತ ಅಭ್ಯರ್ಥಿ ಎಂದು, ಇನ್ನೊಂದು ನಾಮಪತ್ರದಲ್ಲಿ ಬದಲಿ ಅಭ್ಯರ್ಥಿ ಎಂದು ಬರೆದಿದ್ದಾರೆ. ಇದು ಗೊಂದಲಕ್ಕೆ ಕಾರಣವಾಗಿದೆ.

ಈ ವಿಷಯವನ್ನು ಚುನಾವಣಾಧಿಕಾರಿಯಾದ ತಹಶೀಲ್ದಾರ್‌ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಸ್ಪಷ್ಟನೆ ಪಡೆಯಲು ಮುಂದಾಗಿದ್ದಾರೆ.

ADVERTISEMENT

ನಾಮಪತ್ರಗಳ ‘ಬಿ’ ಫಾರ್ಮ್‌ ಸಮಸ್ಯೆ ಚುನಾವಣಾ ಕಣದಲ್ಲಿ ಸಂಚಲನ ಮೂಡಿಸಿದ್ದು, ಯಾವ ಅಭ್ಯರ್ಥಿ ನಾಮಪತ್ರ ಸ್ವೀಕೃತವಾಗಲಿದೆ ಅಥವಾ ಯಾರದ್ದೂ ತಿರಸ್ಕೃತವಾಗುವುದೋ ಎಂಬುದು ಡಿ.17ರಂದು ನಿರ್ಧಾರವಾಗಲಿದೆ.

ಒಟ್ಟು 68 ನಾಮಪತ್ರಗಳ ಪೈಕಿ 66 ನಾಮಪತ್ರ ಸ್ವೀಕೃತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.