ADVERTISEMENT

ಬೆಲೆ ಏರಿಕೆ ಮುಕ್ತ ಭಾರತ ಆಂದೋಲನ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2022, 2:52 IST
Last Updated 2 ಏಪ್ರಿಲ್ 2022, 2:52 IST
ಬೆಲೆ ಏರಿಕೆ ಖಂಡಿಸಿ ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಪಕ್ಷದಿಂದ ಶುಕ್ರವಾರ ಪ್ರತಿಭಟಿಸುವ ಮೂಲಕ ಬೆಲೆ ಏರಿಕೆ ಮುಕ್ತ ಭಾರತ ಆಂದೋಲನಕ್ಕೆ ಚಾಲನೆ ನೀಡಲಾಯಿತು.
ಬೆಲೆ ಏರಿಕೆ ಖಂಡಿಸಿ ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಪಕ್ಷದಿಂದ ಶುಕ್ರವಾರ ಪ್ರತಿಭಟಿಸುವ ಮೂಲಕ ಬೆಲೆ ಏರಿಕೆ ಮುಕ್ತ ಭಾರತ ಆಂದೋಲನಕ್ಕೆ ಚಾಲನೆ ನೀಡಲಾಯಿತು.   

ದಾವಣಗೆರೆ: ಇಂಧನ, ಅಡುಗೆ ಅನಿಲ ಬೆಲೆ ಏರಿಕೆ ಖಂಡಿಸಿ ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಪಕ್ಷದಿಂದ ಶುಕ್ರವಾರ ಪ್ರತಿಭಟಿಸುವ ಮೂಲಕ ಮೂಲಕ ಜಿಲ್ಲೆಯಾದ್ಯಂತ ಬೆಲೆ ಏರಿಕೆ ಮುಕ್ತ ಭಾರತ ಆಂದೋಲನಕ್ಕೆ ಚಾಲನೆ ನೀಡಲಾಯಿತು.

ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ ನೇತೃತ್ವದಲ್ಲಿ ಅಡುಗೆ ಸಿಲಿಂಡರ್‌ಗಳಿಗೆ ಮತ್ತು ವಾಹನಗಳಿಗೆ ಹೂವಿನ ಮಾಲೆ ಹಾಕಿದ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ದಿನೇಶ್ ಕೆ.ಶೆಟ್ಟಿ ಮಾತನಾಡಿ, ‘ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪ್ರತಿ ದಿನ ಲೀಟರ್‌ಗೆ 80 ಪೈಸೆ ಏರಿಕೆ
ಯಾಗುತ್ತಿದೆ. ಹತ್ತು ದಿನಗಳಲ್ಲಿ ಲೀಟರ್‌ಗೆ ₹ 6.40 ಹೆಚ್ಚಾಗಿದೆ. ಮಾರ್ಚ್‌ 22ರ ನಂತರ ಸತತ 9 ಬಾರಿ ಇಂಧನ ಬೆಲೆ ಹೆಚ್ಚಾಗಿದೆ. ಬೆಲೆ ಏರಿಕೆ ನಿಯಂತ್ರಿಸುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ’ ಎಂದು ದೂರಿದರು.

ADVERTISEMENT

ಬೆಲೆ ಏರಿಕೆ ಮುಕ್ತ ಭಾರತ ಆಂದೋಲನದಡಿ ಹಣದುಬ್ಬರ ವಿರುದ್ಧ ಕಾಂಗ್ರೆಸ್ ವಾರದವರೆಗೆ ದೇಶಾದ್ಯಂತ ಪ್ರತಿಭಟನೆ ನಡೆಸಲಾಗುತ್ತಿದೆ. ದಾವಣಗೆರೆ ಜಿಲ್ಲೆಯಲ್ಲೂ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ತಮ್ಮ ಮನೆಗಳ ಮುಂಭಾಗದಲ್ಲಿ ಅಡುಗೆ ಅನಿಲ ಸಿಲಿಂಡರ್ ಇಟ್ಟು ಜಾಗಟೆ ಬಾರಿಸುವ ಮೂಲಕ ಪ್ರತಿಭಟನೆ ನಡೆಸಬೇಕು ಎಂದು ಹೇಳಿದರು.

ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಜಿ.ಎಸ್.ಮಂಜುನಾಥ್, ಸದಸ್ಯ ಎ.ನಾಗರಾಜ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಸ್.ಮಲ್ಲಿಕಾರ್ಜುನ್‌, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅಯೂಬ್ ಪೈಲ್ವಾನ್, ಕೆ.ಜಿ. ಶಿವಕುಮಾರ್, ಸಾಮಾಜಿಕ ಜಾಲತಾಣದ ಹರೀಶ್ ಕೆ.ಎಲ್.ಬಸಾಪುರ, ಹಿಂದುಳಿದ ಘಟಕದ ಜಮ್ನಳ್ಳಿ ನಾಗರಾಜ್, ಮುಖಂಡರಾದ ವಿಜಯ್ ಜೈನ್, ರಾಜು ಭಂಡಾರಿ, ಶ್ರೀಕಾಂತ್ ಬಗೇರ, ಎಸ್.ರವಿ, ಗೋಪಾಲ್, ಯುವರಾಜ್, ಸತೀಶ್ ರಾಜ್, ಕವಿತಾ, ಮಹಿಳಾ ಕಾಂಗ್ರೆಸ್‌ನ ದ್ರಾಕ್ಷಾಯಣಮ್ಮ, ರಾಜೇಶ್ವರಿ, ನಾಗರತ್ನಮ್ಮ, ಶುಭಮಂಗಳ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.